ಶಿಖರ್ ಧವನ್ ಏಕಾಂಗಿ ಹೋರಾಟ: ಗೆಲುವಿಗೆ 144 ರನ್ ಟಾರ್ಗೆಟ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.

ಇದರ ನಡುವೆ ಆ ನಾಯಕ ಶಿಖರ್ ಧವನ್ ಅಜೇಯ 99 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 143 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಭಾಸಿಮ್ರನ್ ಸಿಂಗ್ ಡಕೌಟ್ ಆದರು. ಶಿಖರ್ ಧವನ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಒಂದೆಡೆ ಭುವನೇಶ್ವರ್ ಕುಮಾರ್ ಮಾರಕ ದಾಳಿ ಆರಂಭಿಸಿದರೆ, ಮತ್ತೊಂದೆಡೆ ಮಯಾಂಕ್ ಮಾರ್ಕಂಡೆ ದಾಳಿ ತೀವ್ರಗೊಂಡಿತು.ಮಾರ್ಕಾ ಜಾನ್ಸೀನ್ ಆರ್ಭಟಕ್ಕೆ ಮ್ಯಾಥ್ಯೂ ಶಾರ್ಟ್ ಹಾಗೂ ಜಿತಿನ್ ಶರ್ಮಾ ವಿಕೆಟ್ ಕಳಚಿತು.

ಸ್ಯಾಮ್ ಕುರನ್ ಹಾಗೂ ಶಿಖರ್ ಧವನ್ ಹೋರಾಟದಿಂದ ಪಂಜಾಬ್ ಕಿಂಗ್ಸ್ ಚೇತರಿಸಿಕೊಂಡಿತು. ಆದರೆ ಕುರನ್ 22 ರನ್ ಸಿಡಿಸಿ ಔಟಾದರು. ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ, ಮತ್ತೊಂದೆಡೆ ಶಿಖರ್ ಧವನ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಿಕಂದರ್ ರಾಜಾ, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಾಹುಲ್ ಚಹಾರ್, ನತನ್ ಎಲ್ಲಿಸ್ ಅಬ್ಬರಿಸದೆ ವಿಕೆಟ್ ಕೈಚೆಲ್ಲಿದರು.

ಏಕಾಂಗಿ ಹೋರಾಟ ನೀಡಿದ ಧವನ್ 66 ಎಸೆತದಲ್ಲಿ ಅಜೇಯ 99 ರನ್ ಸಿಡಿಸಿದರು.ಪಂಜಾಬ್ 9 ವಿಕೆಟ್ ನಷ್ಟಕ್ಕೆ 143 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!