ದೇಶದಲ್ಲಿ 45ರಷ್ಟು ಶಾಸಕರು ಕ್ರಿಮಿನಲ್ಸ್! ಯಾವ ರಾಜ್ಯ ನಂ.1 ? ಇಲ್ಲಿದೆ ಡಿಟೈಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ದೇಶದಲ್ಲಿ ಶೇ. 45ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದು,ಶೇ.29ರಷ್ಟು ಶಾಸಕರ ಮೇಲೆ ಗಂಭೀರ ಪ್ರಕರಣಗಳಿವೆ ಎಂದು ಎಡಿಆರ್‌ ಸಂಸ್ಥೆ ವರದಿ ಮಾಡಿದೆ.

ದಿ ಅಸೋಸಿಯೇಷನ್ ಆಫ್‌ ಡೆಮಾಕ್ರೆಟಿಕ್ ರಿಫಾರ್ಮ್ಸ್‌( ಎಡಿಆರ್‌) ಸಂಸ್ಥೆಯು 28 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4123 ಶಾಸಕರ ಪೈಕಿ 4092 ಶಾಸಕರು ಸಲ್ಲಿಸಿರುವ ಅಫಿಡವಿಟ್‌ ಪರಿಶೀಲನೆ ನಡೆಸಿ ಈ ಶಾಕಿಂಗ್ ಮಾಹಿತಿ ಹೊರ ಹಾಕಿದೆ.

1861 ಶಾಸಕರು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಆ ಪೈಕಿ ಶೇ.29ರಷ್ಟು ಅಂದರೆ 1205 ಶಾಸಕರ ಮೇಲೆ ಕೊಲೆ, ಕೊಲೆ ಯತ್ನ ಸೇರಿದಂತೆಹಲವು ಗಂಭೀರ ಅಪರಾಧ ಪ್ರಕರಣಳಿವೆ ಎಂದಿದೆ. ಈ ಪೈಕಿ 54 ಶಾಸಕರು ಕೊಲೆ , 226 ಶಾಸಕರು ಕೊಲೆ ಯತ್ನ, 127 ಶಾಸಕರು ಮಹಿಳಾ ದೌರ್ಜನ್ಯ, 13 ಶಾಸಕರು ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದಾರೆ ಎಂದಿದ್ದಾರೆ.

ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಶೇ.79ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಉಳಿದಂತೆ ಕೇರಳ, ತೆಲಂಗಾಣದಲ್ಲಿ ತಲಾ ಶೇ.69, ಬಿಹಾರ ಶೇ.66, ಮಹಾರಾಷ್ಟ್ರಶೇ.65, ತಮಿಳುನಾಡಿನ ಶೇ.59 ಶಾಸಕರ ಮೇಲೆ ಕ್ರಿಮಿನಲ್‌ ಪ್ರಕರಣವಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!