ಫಿಲಿಪೈನ್ಸ್ ನಲ್ಲಿ ಭೀಕರ ಪ್ರವಾಹಕ್ಕೆ ಇಬ್ಬರು ಬಲಿ: 46,000 ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫಿಲಿಪೈನ್ಸ್‌ನಲ್ಲಿ ಕ್ರಿಸ್‌ಮಸ್ ದಿನದ ಪ್ರವಾಹದಿಂದಾಗಿ ಸುಮಾರು 46,000 ಜನರನ್ನು ಅವರ ಮನೆಗಳಿಂದ ಸ್ಥಳಾಂತರಿಸಲಾಗಿದೆ. ಜಿಮೆನೆಜ್ ಪಟ್ಟಣದಲ್ಲಿ ಎರಡು ಸಾವುಗಳು ವರದಿಯಾಗಿವೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮಿಂಡನಾವೊದ ದಕ್ಷಿಣ ಪ್ರದೇಶದ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವು ಕ್ಯಾಥೋಲಿಕ್ ರಾಷ್ಟ್ರ ಫಿಲಿಫೆನ್ಸ್‌ ನ ಹಬ್ಬದ ರಜಾದಿನಗಳ ಆಚರಣೆಗಳನ್ನು ಕುಗ್ಗಿಸಿತು.
“ಕೆಲವು ಪ್ರದೇಶಗಳಲ್ಲಿ ನೀರು ಎದೆ ಮಟ್ಟಕ್ಕಿಂತ ಮೇಲಿದೆ. ಆದರೆ ಇಂದು ಮಳೆಯು ನಿಂತಿದೆ” ಎಂದು ನಾಗರಿಕ ರಕ್ಷಣಾ ಕಾರ್ಯಕರ್ತ ರಾಬಿನ್ಸನ್ ಲ್ಯಾಕ್ರೆ ಹೇಳಿದೆ. ಪ್ರವಾಹದ ಉತ್ತುಂಗದಲ್ಲಿ ಒಝಾಮಿಜ್ ನಗರ ಮತ್ತು ಕ್ಲಾರಿನ್ ಪಟ್ಟಣದಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಕುಟುಂಬಗಳ ಸದಸ್ಯರನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್‌ಗಾರ್ಡ್ ಹೇಳಿದೆ.  ಕ್ರಿಸ್‌ಮಸ್ ದಿನ ಕೇಂದ್ರ ದ್ವೀಪವಾದ ಲೇಟೆಯ ಕರಾವಳಿಯಲ್ಲಿ ಬಲವಾದ ಗಾಳಿ ಬೀಸಿದ್ದು ದೊಡ್ಡ ಅಲೆಗಳು ಮೀನುಗಾರಿಕಾ ದೋಣಿ ಮುಳುಗಿದವು ಎಂದು ಕೋಸ್ಟ್‌ಗಾರ್ಡ್ ಹೇಳಿದೆ. ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ.
ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ತುತ್ತಾಗುವ ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಫಿಲಿಪೈನ್ಸ್ ಸ್ಥಾನ ಪಡೆದಿದೆ. ಪ್ರಪಂಚದಲ್ಲಿ ಉಷ್ಣತೆ ಹೆಚ್ಚುತ್ತಿದ್ದಂತೆ ಚಂಡಮಾರುತಗಳು ಹೆಚ್ಚು ಶಕ್ತಿಶಾಲಿಯಾಗುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!