ತಿಂದಿದ್ದು ಸ್ವಲ್ಪ ಆದರೆ ಹೊಟ್ಟೆ ಭಾರ ಆಗೋಯ್ತು, ಇಷ್ಟು ತಿನ್ನಬಾರದಿತ್ತು ಎಂದೆಲ್ಲಾ ನೀವು ಆಲೋಚನೆ ಮಾಡಿದ್ದೀರಾ? ಹೆಚ್ಚು ಊಟ ಮಾಡಲಿ, ಬಿಡಲಿ ಒಬ್ಬೊಬ್ಬರಿಗೆ ಹೊಟ್ಟೆ ಭಾರ ಆಗುತ್ತದೆ. ಈ ಸಮಯದಲ್ಲಿ ಏನೆಲ್ಲಾ ಕುಡಿಯಬಹುದು ನೋಡಿ..
ನೀರು+ ಜೀರಿಗೆ+ ಸೋಂಪು+ಕೊತ್ತಂಬರಿ ಕಾಳು ನೀರಿಗೆ ಹಾಕಿ ಕುಡಿಯಿರಿ
ನೀರಿಗೆ ಬೆಲ್ಲ, ಕೊತ್ತಂಬರಿ ಕಾಳು ಹಾಗೂ ಜೀರಿಗೆ, ಶುಂಠಿ ಹಾಕಿ ಕುದಿಸಿ ನೀರು ಕುಡಿಯಿರಿ
ನೀರಿಗೆ ಪುದೀನಾ, ತುಳಸಿ, ಕಾಳುಮೆಣಸು, ಬೆಲ್ಲ ಹಾಕಿ ಕುದಿಸಿ ಕುಡಿಯಿರಿ
ನೀರಿಗೆ ಓಂ ಕಾಳು, ಕೊತ್ತಂಬರಿ ಕಾಳು, ಬೆಲ್ಲ ಹಾಕಿ ಕುದಿಸಿ ಕುಡಿಯಿರಿ
ಬಿಸಿ ನೀರಿಗೆ ನಿಂಬುರಸ ಹಾಕಿ ಕುಡಿಯಿರಿ