Tuesday, May 30, 2023

Latest Posts

ದಾಖಲೆಯಿಲ್ಲದೆ 480 ಗ್ರಾಂ. ಚಿನ್ನಾಭರಣ, 6 ಲಕ್ಷ ನಗದು ಜಪ್ತಿ

ಹೊಸದಿಗಂತ ವರದಿ ವಿಜಯಪುರ:‌ 

ದಾಖಲಾತಿ ಇಲ್ಲದೇ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 480 ಗ್ರಾಂ. ಚಿನ್ನಾಭರಣ, 6 ಲಕ್ಷ ನಗದನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಕ್ರಾಸ್ ಬಳಿ ಗುರುವಾರ ನಡೆದಿದೆ.

ಎಂಎಚ್ 13- ಎಝಡ್ 4201 ನಂಬರಿನ ಕಾರಿನಲ್ಲಿ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಈ ಘಟ‌ನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ವಿಜಯ ಪಡೋಳಕರ ಈತನನ್ನು ವಶಕ್ಕೆ ಪಡೆಯಲಾಗಿದೆ.

ಡಿವೈಎಸ್ಪಿ‌ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!