Friday, June 9, 2023

Latest Posts

ದಿನಭವಿಷ್ಯ| ಸಂಬಂಧವೊಂದು ಗಟ್ಟಿಗೊಳ್ಳುವುದು,. ವೈವಾಹಿಕ ಸಂಬಂಧ ಕೂಡಿಬರಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಹಲವಾರು ಕಾರ್ಯ ಬಾಕಿ ಉಳಿಸಿದ್ದೀರಿ. ಅವನ್ನು ಪೂರೈಸಲು ಗಮನ ಕೊಡಿ. ಹೊಸ ವ್ಯವಹಾರಕ್ಕೆ ಈಗಲೇ ಕೈಹಾಕದಿರಿ. ಆರ್ಥಿಕ ಕೊರತೆ ಉಂಟಾದೀತು.

ವೃಷಭ
ನೀವು ಉದ್ದೇಶಿಸಿದ ಕಾರ್ಯಕ್ಕೆ ಇತರರ ಸಹಕಾರ, ಬೆಂಬಲ ದೊರಕುವುದು. ಹಿನ್ನಡೆಯ ಭೀತಿ ಬೇಡ. ಕೌಟುಂಬಿಕ ಸಮಾಧಾನ.

ಮಿಥುನ
ವೃತ್ತಿಯಲ್ಲಿನ ಒತ್ತಡ ಇಂದು ಕಡಿಮೆ ಆಗುವುದು. ಹಾಗಾಗಿ ಕುಟುಂಬ ಸದಸ್ಯರ ಜತೆ  ಹೆಚ್ಚು ಕಾಲ ಕಳೆಯಲು ಅವಕಾಶ. ಹಣದ ವಿಷಯ ನಿರಾಳ.

ಕಟಕ
ಬದಲಾವಣೆಯ ದಿನ. ಕೆಲವು ಬದಲಾವಣೆಗೆ ಸಾಕ್ಷಿಯಾಗುವಿರಿ. ನೆಗೆಟಿವ್ ಚಿಂತನೆಗಳು ಮನಸ್ಸನ್ನು ಕಾಡದಂತೆ ನೋಡಿಕೊಳ್ಳಿ. ದೇವರ ಪ್ರಾರ್ಥನೆ ಮಾಡಿರಿ.

ಸಿಂಹ
ನಿಮ್ಮ ಏಕಾಂಗಿ ಭಾವವನ್ನು ನಿವಾರಿಸು ವಂತಹ ಆಪ್ತರು ಸಿಗಬಹುದು. ಅವರ ಸಂಗದಲ್ಲಿ ಸಂತೋಷ. ಭಾವನಾತ್ಮಕ ಬಂಧ ಬೆಳೆಯಬಹುದು.

ಕನ್ಯಾ
ಅನಿರೀಕ್ಷಿತ ಧನಪ್ರಾಪ್ತಿ. ಕಾರ್ಯದಲ್ಲಿ ಸಫಲತೆ. ಸಂಬಂಧವೊಂದು ಗಟ್ಟಿಗೊಳ್ಳುವುದು. ವೈವಾಹಿಕ ಸಂಬಂಧ ಕೂಡಿಬರಬಹುದು. ಒಟ್ಟಿನಲ್ಲಿ ಪೂರಕ ದಿನ.

ತುಲಾ
ಅನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ಅದು ನಿಮ್ಮ ಪಾಲಿಗೆ ಒಳಿತನ್ನೇ ತರಬಹುದು. ನಿಮ್ಮ ಆತ್ಮವಿಶ್ವಾಸ ವೃದ್ಧಿಸುವುದು. ಬಂಧುಗಳ ಸಹಕಾರ.

ವೃಶ್ಚಿಕ
ಆಪ್ತರೊಂದಿಗೆ ಸಂಬಂಧ ಕೆಡಬಹುದು. ಸಂಯಮದಿಂದ ನಡಕೊಳ್ಳಿ. ನಿಮ್ಮ ಮಾತು ಅವರನ್ನು ಘಾಸಿ ಮಾಡದಂತೆ ನೋಡಿಕೊಳ್ಳಿ.

ಧನು
ಕಾರ್ಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಪ್ರಮಾದಗಳು ಸಂಭವಿಸುವ ಸಾಧ್ಯತೆ. ಬಂಧುಗಳಿಂದ ಕಿರಿಕಿರಿ ಅನುಭವಿಸುವಿರಿ. ಮನಶ್ಯಾಂತಿ ದೂರ.

ಮಕರ
ಸವಾಲಿನ ದಿನ. ಸಹೋದ್ಯೋಗಿಗಳ ವರ್ತನೆ ಕುರಿತು ಎಚ್ಚರ ದಿಂದಿರಿ. ಅವರ ನಡತೆ ನಿಮಗೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು.

ಕುಂಭ
ಏರಿಳಿತಗಳ ದಿನ. ವ್ಯವಹಾರದಲ್ಲಿ ಏಳಿಗೆ. ಆರ್ಥಿಕ ಪ್ರಗತಿ. ಆದರೆ ಕೌಟುಂಬಿಕವಾಗಿ ಕೆಲವು ಅನಪೇಕ್ಷಿತ ಬೆಳವಣಿಗೆ. ಆಪ್ತರಲ್ಲಿಯೇ ವಿರಸ  ಮೂಡಬಹುದು.

ಮೀನ
ಸಂಬಂಧವನ್ನು ಸರಿಯಾಗಿ ಕಾಯ್ದುಕೊಳ್ಳಿ. ಸಣ್ಣ ವಿಷಯಗಳು ವಿರಸ ಮೂಡಿಸದಂತೆ ನೋಡಿಕೊಳ್ಳಿ. ಮಾತು  ನಿಯಂತ್ರಣದಲ್ಲಿರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!