ಇಂಡೋನೇಷ್ಯಾದ ಕೆನ್‌ಕಾಂಗ್‌ನಲ್ಲಿ ನಡುಗಿದ ಭೂಮಿ : 5.2 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇಂಡೋನೇಷ್ಯಾದ ಕೆನ್‌ಕಾಂಗ್‌ನಿಂದ 256 ಕಿಮೀ ದಕ್ಷಿಣಕ್ಕೆ ಗುರುವಾರ ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಕೆನ್‌ಕಾಂಗ್ ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದ ಒಂದು ಜಿಲ್ಲೆಯಾಗಿದ್ದು, ಇಲ್ಲಿ ಬೆಳಗ್ಗೆ 5:20ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಮೀ ಆಳದಲ್ಲಿ ಅಪ್ಪಳಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಮಾಹಿತಿ ನೀಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!