ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪಲ್ ಐಫೋನ್ ಗೆ ಬಿಡಿಭಾಗಗಳ ಪೂರೈಕೆದಾರನಾಗಿರುವ ತೈವಾನೀಸ್ ಕಂಪನಿ ಫಾಕ್ಸ್ ಕಾನ್ ಈಗ ಆಪಲ್ ಏರ್‌ಪಾಡ್ ಉತ್ಪಾದನೆಯನ್ನೂ ಆರಂಭಿಸಲಿದ್ದು ಈ ಕುರಿತಾಗಿ ಆಪಲ್ ಕಂಪನಿಯೊದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ ಆಪಲ್ ನ 70 ಶೇಕಡಾದಷ್ಟು ಐಫೋನ್‌ಗಳನ್ನು ಗುತ್ತಿಗೆಯ ಆಧಾರದಲ್ಲಿ ಫಾಕ್ಸ್‌ಕಾನ್ ಜೋಡಿಸಿಕೊಡುತ್ತಿದೆ. ಪ್ರಸ್ತುತ ಏರ್‌ಪಾಡ್ ಗಳನ್ನೂ ಪಾಕ್ಸ್ ಕಾನ್ ಉತ್ಪಾದಿಸಲಿದ್ದು ಈ ಕುರಿತಾಗಿ ಅದು ಭಾರತವನ್ನು ಎದರುರು ನೋಡುತ್ತಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.
ಚೀನಾವನ್ನು ಹೊರತುಪಡಿಸಿ ಭಾರತದಲ್ಲಿ ಏರ್‌ಪಾಡ್ ಕಾರ್ಖಾನೆ ಸ್ಥಾಪಿಸಲು ಫಾಕ್ಸ್ ಕಾನ್ ಯೋಚಿಸುತ್ತಿದ್ದು ತೆಲಂಗಾಣದಲ್ಲಿ ಕಾರ್ಖಾನೆ ಸ್ಥಾಪಿಸಲು 200 ಮಿಲಿಯನ್ ಡಾಲರುಗಳನ್ನು ಫಾಕ್ಸ್ ಕಾನ್ ಹೂಡಿಕೆ ಮಾಡಲಿದೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯೀಟರ್ಸ್ ವರದಿ ಮಾಡಿದೆ. ಭಾರತದಲ್ಲಿ ಕಾರ್ಖಾನೆ ತೆರೆಯಲು ಸ್ವತಃ ಆಪಲ್ ಬೇಡಿಕೆಯಿಟ್ಟಿದೆ ಎನ್ನಲಾಗಿದ್ದು ಎಷ್ಟು ಪ್ರಮಾಣದಲ್ಲಿ ಏರ್ ಪಾಡ್ ಉತ್ಪಾದನೆಯಾಗಲಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.