Monday, October 2, 2023

Latest Posts

ಬೆಸ್ಕಾಂ ನಕಲಿ ನೇಮಕಾತಿ ಪ್ರಕರಣ: ಐವರು ಆರೋಪಿಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಲಕ್ಷಾಂತರ ರೂಪಾಯಿ ಹಣ ಪಡೆದು ಬೆಸ್ಕಾಂಗೆ ನಕಲಿ ನೇಮಕಾತಿ ಮಾಡಿದ್ದ ಐವರು ಆರೋಪಿಗಳನ್ನು ಬೆಂಗಳೂರು ನಗರದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವೈಭವ್, ಶಿವಪ್ರಸಾದ್, ವಿಜಯ್ ಕುಮಾರ, ಪ್ರದೀಪ್, ಪುರುಷೋತ್ತಮ ಬಂಧಿತ ಅರೋಪಿಗಳಾಗಿದ್ದಾರೆ. ಇಪ್ಪತ್ತು ಲಕ್ಷ ಹಣಕ್ಕೆ ನಕಲಿ ನೇಮಕಾತಿ ಮಾಡಿ ವ್ಯಕ್ತಿಗಳಿಗೆ ವಂಚಿಸಿದ ಆರೋಪದಡಿ ಬಂಧಿಸಲಾಗಿದೆ.

ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಹೆಸರಲ್ಲಿ ನಕಲಿ ಸೀಲು ಹಾಕಿ ಹಣ ಕೊಟ್ಟ ಉದ್ಯೋಗ ಆಕಾಂಕ್ಷಿಗಳಿಗೆ ನೇಮಕಾತಿ ಪತ್ರ ನೀಡಿದ್ದಾರೆ. ಅದರಂತೆ ನೇಮಕಾತಿ ಆದೇಶ ಪತ್ರ ಹಿಡಿದು ಕೆಸಲಕ್ಕೆ ಸೇರಲೆಂದು ಕಚೇರಿಗೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ವೈಭವ್ ಎಂಬಾತ ಆನಂದ್ ರಾವ್ ಸರ್ಕಲ್​ನಲ್ಲಿ ಇರುವ ಬೆಂಗಳೂರು ವಿದ್ಯುತ್ ಕಂಪನಿಯಲ್ಲಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಬಂದಿದ್ದ. ಆದೇಶ ಪ್ರತಿ ನೋಡಿದಾಗ ಈ ರೀತಿ ಕಿರಿಯ ಸಹಾಯಕ ಹುದ್ದೆಗೆ ನೇಮಕಾತಿ ಆಗಿಲ್ಲಾ ಎಂದು ತಿಳಿದುಬಂದಿದೆ. ನಂತರ ಆದೇಶ ಪ್ರತಿ ಪರಿಶೀಲನೆ ಮಾಡಿದಾಗ ಅದೊಂದು ನಕಲಿ ಆದೇಶ ಎಂದು ಗೊತ್ತಾಗಿದೆ.

ಸರ್ಕಾರದ ಸೀಲು, ಅಧಿಕಾರಿಗಳ ಸಹಿ ಎಲ್ಲವನ್ನು ನಕಲಿಯಾಗಿ ಸೃಷ್ಟಿ ಮಾಡಲಾಗಿತ್ತು. ಈ ಬಗ್ಗೆ ಹೌಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದು, ಅರೋಪಿಗಳು ಇನ್ನು ಹಲವರಿಗೆ ನಕಲಿ ನೇಮಕಾತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!