ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಜನತೆಗೆ ಸಿಹಿಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಹೊಸದಾಗಿ 50 ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂದಿರಾ ಕ್ಯಾಂಟೀನ್ ಅನ್ನು 198 ರಿಂದ 250ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಮೂಲಕ ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸಲಿದೆ. ಗುಣಮಟ್ಟದ ಆಹಾರ ನೀಡಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್ ತಲೆ ಎತ್ತಲಿದ್ದು, ವಿವಿಧ ಬಗೆಯ ತಿಂಡಿ ಊಟ ಸಿಗಲಿದೆ. ಮೇ 29 ರಿಂದ ಕ್ಯಾಂಟೀನ್ ಆರಂಭವಾಗಲಿದ್ದು, ತಿಂಡಿಗೆ 10 ರೂ, ಊಟಕ್ಕೆ 20 ರೂ ಬೆಲೆ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಲೆ ಏರಿಸಿ ಶುಚಿಕರ ತಿಂಡಿ ಊಟ ನೀಡಲು ಸಿದ್ದತೆ ನಡೆಸಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ ಮೆನು
ಬೆಳಗ್ಗೆ ತಿಂಡಿಗೆ 2 ಇಡ್ಲಿ 1 ವಡೆ, ಉಪ್ಪಿಟ್ಟು – ಕೇಸರಿಬಾತ್, ಬಿಸಿಬೇಳೆ ಬಾತ್, ಪೂಳಿಯೊಗರೆ, ಚಿತ್ರಾನ್ನ , ವಾಂಗಿಬಾತ್, , ರೈಸ್ ಬಾತ್ ಟೋಮ್ಯಾಟೋ ಬಾತ್ ಸಿಗಲಿದೆ. ಮಧ್ಯಾಹ್ನದ ಊಟಕ್ಕೆ ಒಂದು ಚಪಾತಿ, ಮುದ್ದೆ, ಒಂದು ವೆಜ್ ಪಲ್ಯಾ, ಕಪ್ ವೈಟ್ ರೈಸ್, ಸಾಂಬಾರ್ ಹಾಗೂ ರಸಂ, ವೆಜ್ ಪಲ್ಯಾ ಸಿಗಲಿದೆ. ಇನ್ನು ವಾರದಲ್ಲಿ ಮೂರು ದಿನ ಮಧ್ಯಾಹ್ನ ಸಿಹಿ ತಿಂಡಿ , ಹೋಳಿಗೆ, ಅಕ್ಕಿಪಾಯಸ, ಕೇಸರಿ ಬಾತ್ ಹಾಗೂ ರಾತ್ರಿ ಊಟಕ್ಕೆ ರೈಸ್ ಬಾತ್, ಅನ್ನ ಸಾಂಬಾರ್ ಇರಲಿದೆ.