PFI ಕರೆಕೊಟ್ಟ ಹರತಾಳದಿಂದ 5 ಕೋಟಿ ರೂ. ನಷ್ಟ: ಪರಿಹಾರಕ್ಕೆ ಹೈಕೋರ್ಟ್‌ ಮೊರೆಹೋದ ಕೇರಳ ಸಾರಿಗ ಸಂಸ್ಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವು ದಿನಗಳ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI)ದ ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ NIA ನಡೆಸಿದ ದಾಳಿಯನ್ನು ವಿರೋಧಿಸಿ, ಪಿಎಫ್ಐ ಕೇರಳದಲ್ಲಿ ನಡೆಸಿದ ಹರತಾಳದಲ್ಲಿ ಅತೀ ಹೆಚ್ಚು ನಾಶ ನಷ್ಟಗಳು ಉಂಟಾಗಿದೆ.

ಕೇರಳ ಸಾರಿಗೆ ಸಂಸ್ಥೆ ಬಸ್ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಕೇರಳ ಸಾರಿಗೆ ಸಂಸ್ಥೆಗೆ ಬರೋಬ್ಬರಿ 5 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಇದೀಗ ಈ ಮೊತ್ತ ಭರಿಸುವಂತೆ ಕೇರಳ ಸಾರಿಗ ಸಂಸ್ಥೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

PFI ಸೆಪ್ಟೆಂಬರ್ 23 ರಂದು ನಡೆಸಿದ ಪ್ರತಿಭಟನೆ ವೇಳೆ ಕೇರಳದಲ್ಲಿ ಅತೀ ಹೆಚ್ಚು ಬಸ್‌ಗಳು(KSRTC) ಧ್ವಂಸಗೊಂಡಿತ್ತು. 5.06 ಕೋಟಿ ರೂಪಾಯಿ ನಷ್ಟವಾಗಿದೆ. ಈ ಸಂಪೂರ್ಣ ಮೊತ್ತವನ್ನು ಪಿಎಫ್ಐ ಭರಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಈ ಹಿಂದೆ ಪಿಎಫ್ಐ ದಿಢೀರ್ ಪ್ರತಿಭಟೆನೆ ವಿರುದ್ಧ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಸಾರ್ವಜನಿಕರಿಗೆ ಆದ ಸಮಸ್ಯೆಯನ್ನು ಗಮನಿಸಿದ ಕೋರ್ಟ್ ಪಿಎಫ್ಐ ಯಾವುದೇ ಪ್ರತಿಭಟೆ ಮಾಡುವುದಕ್ಕಿಂತ ಮೊದಲೇ ನೋಟಿಸ್ ನೀಡಬೇಕು. ಕನಿಷ್ಠ 7 ದಿನಕ್ಕೂ ಮೊದಲು ಪ್ರತಿಭಟನೆ ನೋಟಿಸ್ ಪೊಲೀಸರಿಗೆ ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ ಸೆ.23 ರಂದು ಕೇರಳದಲ್ಲಿ ಪಿಎಫ್ಐ ಮಾಡಿದ ಪ್ರತಿಭಟನೆಗೂ ಮುನ್ನ ಯಾವುದೇ ನೋಟಿಸ್ ನೀಡಿಲ್ಲ.

ಈ ಹಿಂದೆ ನಡೆದ ಪ್ರತಿಭಟನೆಗಳ ವೇಳೆ ಕೆಎಸ್‌ಆರ್‌ಟಿಸಿ ತನ್ನ ನಷ್ಟಗಳನ್ನು ಭರಿಸಿದೆ. ಆದರೆ ಇನ್ನು ಮುಂದಿನ ಪ್ರತಿಭಟನೆಯಲ್ಲಿನ ನಷ್ಟಗಳನ್ನು ಆಯಾ ಪ್ರತಿಭಟನೆ ಮಾಡುವ ಸಂಘಟನೆ, ಪಕ್ಷಗಳೇ ಭರಿಸಬೇಕು ಎಂದು ಮನವಿಯಲ್ಲಿ ಹೇಳಿದೆ.

ಕೇರಳ ಸಾರಿಗೆ ಸಂಸ್ಥೆಯ 58 ಬಸ್‌ಗಳು ಹಾನಿಯಾಗಿದೆ. ಅತೀ ದೊಡ್ಡ ನಷ್ಟ ಸಾರಿಗೆ ಸಂಸ್ಥೆಗೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!