Wednesday, November 29, 2023

Latest Posts

ಫ್ರಿಡ್ಜ್‌ ಕಂಪ್ರೆಸ್ಸರ್‌ ಸ್ಫೋಟ: ಒಂದೇ ಕುಟುಂಬದ ಐವರು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫ್ರಿಡ್ಜ್‌ ಕಂಪ್ರೆಸರ್‌ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದುರಂತ ಘಟನೆ ಪಂಜಾಬ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಜಲಂಧರ್‌ನ ಅವತಾರ್‌ ನಗರದ ಮನೆಯಲ್ಲಿ ರಾತ್ರಿ ಕಂಪ್ರೆಸ್ಸರ್‌ ಸ್ಫೋಟಗೊಂಡಿದೆ. ಅದರ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಿತಾದರೂ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.

ಮೃತರನ್ನು ಯಶಪಾಲ್‌ ಘೈ (70), ರುಚಿ ಘೈ (40), ಮಾನ್ಶಾ (14), ದಿಯಾ (12) ಹಾಗೂ ಅಕ್ಷಯ್‌ (10) ಎಂಬುದಾಗಿ ಗುರುತಿಸಲಾಗಿದೆ.

ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿದ್ದು, ಕಂಪ್ರೆಸ್ಸರ್‌ ಸ್ಫೋಟಕ್ಕೆ ಕಾರಣ ಏನು ಎಂಬುದರ ಕುರಿತು ಪರಿಶೀಲನೆ ನಡೆಸಿದ್ದಾರೆ. ತನಿಖೆಯ ಬಳಿಕವಷ್ಟೇ ಕಂಪ್ರೆಸರ್‌ ಸ್ಫೋಟಕ್ಕೆ ಕಾರಣ ತಿಳಿದುಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!