ಗಟಾರದ ಇಲಿಗಳ ಬಳಿಯಿತ್ತು 5 ಲಕ್ಷ ಮೌಲ್ಯದ ಚಿನ್ನ : ಮುಂಬೈನಲ್ಲೊಂದು ವಿಲಕ್ಷಣ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಇಲಿಗಳೆಂದರೆ ಕೂಡಲೇ ದೊಣ್ಣೆ ತಂದು ಹೊಡೆಯಲೆತ್ನಿಸುವವರೇ ಜಾಸ್ತಿ. ಆದರೆ ಈ ಘಟನೆ ಓದಿದ ನಂತರ ನೀವು ಇನ್ನು ಮುಂದೆ ಇಲಿಗಳನ್ನು ಕಂಡರೆ ಅವುಗಳ ಬಿಲಗಳನ್ನು ಮತ್ತೊಮ್ಮೆ ಪರಿಶೀಲಿಸಿ ನೋಡುತ್ತೀರಿ ಯಾಕಂತೀರಾ? ಕಾರಣ ಇಲ್ಲಿದೆ ನೋಡಿ

ಮುಂಬೈನ ಗೋಕುಲ್‌ ಧಾಮ್‌ ಕಾಲೋನಿಯ ಬಳಿ ವಿಲಕ್ಷಣ ಘಟನೆ ವರದಿಯಾಗಿದೆ. ಗಟಾರದಲ್ಲಿರುವ ಇಲಿಗಳ ಬಳಿಯಿಂದ 5 ಲಕ್ಷ ರೂಪಾಯಿ ಮೌಲ್ಯದ 10 ತೊಲೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸ್ವತಃ ಪೋಲೀಸರೇ ಮಾಹಿತಿ ನೀಡಿದ್ದಾರೆ.

ಚಿನ್ನಾಭರಣವನ್ನು ಬ್ಯಾಂಕ್‌ಗೆ ಠೇವಣಿ ಇಡಲು ಹೋಗುತ್ತಿದ್ದ ಮಹಿಳೆಯೊಬ್ಬರು ಚಿನ್ನ ತುಂಬಿದ್ದ ಪ್ಯಾಕೇಟನ್ನು ಬ್ರೆಡ್‌ ಎಂದು ತಪ್ಪಾಗಿ ಅರ್ಥೈಸಿಕೊಂಡು ಅಲ್ಲೇ ಪಕ್ಕದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ನೀಡಿದ್ದಾರೆ. ಈ ಮಕ್ಕಳು ಎಷ್ಟು ಮುಗ್ಧರು ನೋಡಿ ಚಿನ್ನದ ಮೌಲ್ಯ ಗೊತ್ತಿಲ್ಲದ ಪಾಪದ ಪುಟಾಣಿಗಳು ಅದರಲ್ಲಿ ತಿನ್ನುವ ವಸ್ತು ಕಾಣಿಸಿಲ್ಲವೆಂದು ಅದನ್ನು ಪಕ್ಕದ ಕಸದಬುಟ್ಟಿಗೆ ಎಸೆದಿದ್ದಾರೆ.

ಕಸದಬುಟ್ಟಿ ಸೇರಿದ ಚಿನ್ನ ಅಲ್ಲಿಂದ ಮೂಷಿಕನ ಬಿಲ ಸೇರಿದೆ. ಈ ಕುರಿತು ಹುಡುಕಾಟ ನಡೆಸುತ್ತಿದ್ದ ಪೋಲೀಸರಿಗೆ ಇಲಿಗಳು ಬಂಗಾರವನ್ನು ಗಟಾರಕ್ಕೆ ಕೊಂಡೊಯ್ಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಪರಿಶೀಲಿಸುವಾಗ ಪತ್ತೆಯಾಗಿದೆ ಎಂದು ಪೋಲೀಸ್‌ ಸಬ್ ಇನ್ಸ್‌ಪೆಕ್ಟರ್ ಜಿ ಘಾರ್ಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!