ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ ಕಾಯಿಲೆಯಿಂದ ಬಳಲುತ್ತಿದೆ 5 ತಿಂಗಳ ಮಗು: ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಹೊಸದಿಗಂತ ವರದಿ, ಹಾವೇರಿ :

ವೈದ್ಯಕೀಯ ರಂಗದಲ್ಲೇ ಅಪರೂಪದ ಕಾಯಿಲೆಗಳಲ್ಲಿ ಒಂದಾದ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ (spinal muscular atrophy)ಯಿಂದ ನಗರದ ಪ್ರತಿಮಾ ಹಾಗೂ ಅನಿಲರಾಜ್ ಬೆಟಗೇರಿ ಅವರ 5 ತಿಂಗಳ ಮಗು ಯುವಿಕ ಈ ಕಾಯಿಲೆಯಿಂದ ಬಳಲುತ್ತಿರುವ ಮಗುವಾಗಿದೆ.
ಈ ಮಗುವಿಗೆ ತಗುಲಿರುವ ಕಾಯಿಲೆಗಳಿಗೆ ಚಿಕಿತ್ಸೆಗೆ ಬೇಕಾದ ಔಷಧಿ 16 ಕೋಟಿ ಬೆಲೆ ಬಾಳುವ ಅತ್ಯಂತ ದುಬಾರಿಯದ್ದಾಗಿದೆ. ಆದರೆ, ಈ ಮಗುವಿಗೆ ಚಿಕಿತ್ಸಗೆ ಬೇಕಾದ ಔಷಧಿಯು ಅಮೇರಿಕಾದಿಂದ ಉಚಿತವಾಗಿ ದೊರೆಯುತ್ತಿರುವುದರಿಂದ ಈ ಮಗು ಹಾಗೂ ಪಾಲಕರಿಗೆ ಒಂದು ಆಶಾಕಿರಣವಾಗಿದೆ.
ಪ್ರಸಕ್ತ ಈ ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಬಾಪಿಸ್ಟ್ ಹಾಸ್ಪಿಟಲ್ ವೈದ್ಯರು ಅಮೇರಿಕಾದಲ್ಲಿನ ವ್ಯೆದ್ಯರನ್ನು ಸಂಪರ್ಕಿಸಿ ಇಷ್ಟೊಂದು ಬೆಲೆ ಬಾಳುವ ಔಷಧಿ ಉಚಿತವಾಗಿ ದೊರೆಯುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಈ ಚಿಕಿತ್ಸೆಯನ್ನು ಸತತ ಆರು ತಿಂಗಳುಗಳ ಕಾಲ ಇದೇ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಕೊಡಿಸಬೇಕಾಗಿರುವುದರಿಂದ ಲಕ್ಷಾಂತರ ರೂಗಳ ಅವಶ್ಯತೆ ಇದೆ.
ಆದರೆ, ಈ ಮಗುವಿನ ಪಾಲಕರು ಆರ್ಥಿವಾಗಿ ಸದೃಢರಲ್ಲ. ಇವರು ನಗರದ ಚಿಕ್ಕ ಪಾದರಕ್ಷೆಯ ಗೂಡಂಗಡಿಯೊಂದನ್ನು ಇಟ್ಟುಕೊಂಡು, ಅಲ್ಲಿನೇ ರಿಪೇರಿಯನ್ನು ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿರುವುದರಿಂದ ಈಗ ಈ ಮಗುವಿಗೆ ಬೆಂಗಳೂರಿನಲ್ಲಿದ್ದುಕೊಂಡು ಚಿಕಿತ್ಸೆ ಕೊಡಿಸುವುದಕ್ಕೆ ಕುಟುಂಬಕ್ಕೆ ಆರ್ಥಿಕ ಸಹಾಯ ಬೇಕಾಗಿದೆ.
ಅಮೇರಿಕಾದಿಂದ ಇನ್ನು ಕೆಲ ವಾರಗಳಲ್ಲಿ ಔಷಧಿ ಬೆಂಗಳೂರಿಗೆ ಬರಲಿದೆ. ಔಷಧಿ ಬಂದ ನಂತರ ಬೆಂಗಳೂರಿನ ಬಾಪಿಸ್ಟ್ ಹಾಸ್ಪಿಟಲ್ ವೈದ್ಯರು ಈ ಮಗುವಿಗೆ ಚಿಕಿತ್ಸೆ ಪ್ರಾರಂಭಿಸಲಿದ್ದಾರೆ. ಅಷ್ಟರೊಳಗಾಗಿ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಬೇಕಾಗಿದೆ.
ಈ ಮಗು ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಮಗುವಿನ ಯಾವುದೇ ಅಂಗಾಗಳು ಕೆಲಸ ಮಾಡುವುದಿಲ್ಲ. ಉಸಿರಾಟ ಮಾಡಲು ಕಷ್ಟ ಆಗುತ್ತಿದೆ. ಕೃತಕ ಉಸಿರಾಟದ ಮೂಲಕ ಉಸಿರಾಡುತ್ತಿದೆ. ಕೈ ಕಾಲು ಕದಲಿಸಲು ಆಗುತ್ತಿಲ್ಲ. ತುಟಿ ಬಿಚ್ಚಿ ಮಾತನಾಡಲೂ ಯುವಿಕಾಳಿಗೆ ಆಗುತ್ತಿಲ್ಲ. ಬೆಂಗಳೂರಿನ ವೈದ್ಯರ ಚಿಕಿತ್ಸೆ ನಂತರವೇ ಮಗುವಿನಿಂದ ಇವೆಲ್ಲ ಕ್ರೀಯೆಗಳು ಆಗುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ವೈದ್ಯರು.
ಈ ದಂಪತಿಗಳ ಮೊದಲನೆಯ ಮಗು ರಾಘವಿಯ ಹೃದಯದಲ್ಲಿ 3 ರಂದ್ರಗಳಿದ್ದ ಪರಿಣಾಮ ಆ ಮಗು 7 ತಿಂಗಳವರೆಗೆ ಮಾತ್ರ ಬದುಕಿತ್ತು. ಈಗ ಎರಡನೇ ಮಗು ಯುವಿಕಗೆ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಈ ದಂಪತಿಗಳು ಕಂಗಾಲಾಗಿರುವುದಂತೂ ಸತ್ಯ.
ಬೆಂಗಳೂರಿನ ಬಾಪಿಸ್ಟ್ ಹಾಸ್ಪಿಟಲ್ ವೈದ್ಯರು ಈ ಮಗುವಿಗೆ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ ಕಾಯಿಲೆಯಿದೆ ಎಂದು ಗುರಿತಿಸುವುದಕ್ಕೂ ಪೂರ್ವದಲ್ಲಿ ಹಲವು ಊರುಗಳ ವೈದ್ಯರಿಂದ ಚಿಕಿತ್ಸೆ ಕೊಡಿಸುವ ಮೂಲಕ ಇಗಾಗಲೇ ಲಕ್ಷಾಂತರ ರೂಗಳ ಸಾಲವನ್ನು ಮಾಡಿ ವೆಚ್ಚಮಾಡಿದ್ದಾರೆ. ಈ ಕುಟುಂಬ ದಿನವೊಂದಕ್ಕೆ 200-300 ಆದಾಯದ ಮೂಲವನ್ನು ಹೊಂದಿದೆ ಈಗ ಈ ಕುಟುಂಬ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಆರ್ಥಿಕ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ ಅನಿಲರಾಜ ಬೆಟಗೇರಿ (ಮೊ:9738512553೫೩) ಸಂಪರ್ಕಿಸಬಹುದು.
ಆರ್ಥಿ ಸಹಾಯ ನೀಡುವವರು ಅನಿಲರಾಜ ಅವರನ್ನು ಸಂಪರ್ಕಿಸಿ ಸಹಾಯ ಮಾಡಬಹುದಾಗಿದೆ.
(ಮೊ:9738512553) (ಪೋನ್‌ಪೇ-ಗೂಗಲ್‌ಪೇ)
ಕೆನರಾ ಬ್ಯಾಂಕ್ ಶಾಖೆ, ಹಾವೇರಿ
ಖಾತೆ ಸಂಖ್ಯೆ:2812101005123
ಐಎಫ್‌ಎಸ್‌ಸಿ ನಂ: ಸಿಎನ್‌ಆರ್‌ಬಿ0002812

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!