Monday, January 30, 2023

Latest Posts

ಮ್ಯಾನ್ಮಾರ್‌ ಗಡಿಯಲ್ಲಿ 15 ಮಾದಕವಸ್ತು ಕಳ್ಳಸಾಗಣೆದಾರನ್ನು ಹತ್ಯೆಗೈದ ಥಾಯ್ಲೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮ್ಯಾನ್ಮಾರ್ ಗಡಿಯ ಸಮೀಪ ದೇಶದ ಉತ್ತರದ ಅರಣ್ಯ ಪ್ರದೇಶದಲ್ಲಿ ಥಾಯ್ ಸೈನಿಕರು 15 ಶಂಕಿತ ಮಾದಕವಸ್ತು ಕಳ್ಳಸಾಗಣೆದಾರನ್ನು ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ಮಾದಕ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಶಂಕಿತರ ಗುಂಪು ಸೈನಿಕರಿಗೆ ಎದುರಾಗಿದೆ. ಅವರನ್ನು ನಿಲ್ಲಿಸಲು ಆದೇಶಿಸಲಾಯಿತು. ಆದರೆ, ಅವರು ಪ್ರತಿಯಾಗಿ ಗುಂಡು ಹಾರಿಸಿದರು ಎಂದು ಥಾಯ್ಲೆಂಡ್‌ನ ಉತ್ತರ ಗಡಿ ಪ್ರಾಂತ್ಯಗಳಲ್ಲಿ ಭದ್ರತಾ ಉಸ್ತುವಾರಿ ವಹಿಸಿರುವ ಸೇನಾ ಘಟಕವಾದ ಫಾ ಮುವಾಂಗ್ ಟಾಸ್ಕ್ ಫೋರ್ಸ್ ತಿಳಿಸಿದೆ.
ಸುಮಾರು 10 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು ಎಂದು ಸಂಸ್ಥೆ ತಿಳಿಸಿದೆ.
ಯಾವುದೇ ಸೈನಿಕರು ಗಾಯಗೊಂಡಿಲ್ಲ ಆದರೆ ಗುರುವಾರ ಮಿಲಿಟರಿ ಚಿಯಾಂಗ್ ಮಾಯ್ ಪ್ರಾಂತ್ಯದ ಫಾಂಗ್ ಜಿಲ್ಲೆಯಲ್ಲಿ ಘಟನಾ ಸ್ಥಳವನ್ನು ಪರಿಶೀಲಿಸಲು ಹೋದಾಗ 15 ಶಂಕಿತ ಕಳ್ಳಸಾಗಾಣಿಕೆದಾರರು ಸತ್ತಿದ್ದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತರು ಮ್ಯಾನ್ಮಾರ್‌ನಿಂದ ಮಾದಕವಸ್ತು ತಂದಿದ್ದಾರೆಯೇ ಎಂದು ಇನ್ನೂ ತನಿಖೆ ನಡೆಸಲಾಗುತ್ತಿದೆ. ಮ್ಯಾನ್ಮಾರ್‌ ನಿಂದ ಥಾಯ್ಲೆಂಡ್‌ಗೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಸಾಮಾನ್ಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!