2025ರ ವೇಳೆಗೆ ಭಾರತದಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ನೆಸ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾನೀಯ ಮತ್ತು ಆಹಾರ ವ್ಯಾಪಾರದಲ್ಲಿ ಜಗತ್ತಿನಾದ್ಯಂತ ಹೆಸರು ಮಾಡಿರೋ ನೆಸ್ಲೆ ಕಂಪನಿಯು ಮುಂದಿನ ಮೂರೂವರೆ ವರ್ಷಗಳಲ್ಲಿ ಅಂದರೆ 2025 ವೇಳೆಗೆ ಭಾರತದಲ್ಲಿ 5,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ ಎಂದು ಅದರ ಸಿಇಒ ಮಾರ್ಕ್ ಷ್ನೇಯ್ಡರ್ ಹೇಳಿದ್ದಾರೆ. ಈ ಕ್ರಮವು ಕಂಪನಿಯು ದೇಶದಲ್ಲಿ ತನ್ನ ಪ್ರಮುಖ ವ್ಯವಹಾರವನ್ನು ವೇಗಗೊಳಿಸಲು ಮತ್ತು ಬೆಳವಣಿಗೆಗೆ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಕ್ಯಾಪೆಕ್ಸ್ (ಬಂಡವಾಳ ವೆಚ್ಚ), ಹೊಸ ಸ್ಥಾವರಗಳನ್ನು ಸ್ಥಾಪಿಸುವುದು, ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಕಂಪನಿಯ ಉತ್ಪನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸುವುದು ಸೇರಿದಂತೆ ವಿವಧ ಯೋಜನೆಯಗಳಿಗೆ ಸಂಬಂಧಿಸಿದಂತೆ ಹೂಡಿಕೆಯಾಗಲಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

“ನಾವು 60 ವರ್ಷಗಳ ಹಿಂದೆ ಈ ದೇಶದಲ್ಲಿ ಉತ್ಪಾದನೆ ಪ್ರಾರಂಭಿಸಿದಾಗಿನಿಂದ ಹೂಡಿಕೆ ಮಾಡಿರುವ ಒಟ್ಟೂ ಮೊತ್ತ 8000 ಕೋಟಿ ರೂ.ಗಳಷ್ಟಿದೆ. ಈಗ ಪ್ರಸ್ತುತ 2025ರ ವೇಳೆಗೆ 5000ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದ್ದೇವೆ. ಭಾರತವು ನೆಸ್ಲೆಯ ಅಗ್ರ ಹತ್ತು ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಹೂಡಿಕೆಯು ಕೇವಲ cpaex ಅನ್ನು ವೇಗಗೊಳಿಸಲು ಮತ್ತು ಹೆಚ್ಚಿಸಲು ಮಾತ್ರವಲ್ಲದೆ ಸಂಪೂರ್ಣ ಅಭಿವೃದ್ಧಿ ಕಾರ್ಯಗಳು, ಬ್ರಾಂಡ್ ನಿರ್ಮಾಣ ಮತ್ತು ನೆಲದ ಮೇಲೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುತ್ತದೆ” ಎಂದು ಷ್ನೇಯ್ಡರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!