ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ಕಿಯೊಂದಿಗೆ ಒಪ್ಪಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಪತ್ನಿ ಗಂಡನೊಂದಿಗೆ ಸಂಸಾರ ಮಾಡಲು ದಿನವೊಂದಕ್ಕೆ 5,000 ರೂ. ಬೇಡಿಕೆಯಿಡುವುದರ ಜೊತೆಗೆ ಬ್ಯೂಟಿ ಹಾಳಾಗುತ್ತೆ ಸ್ವಂತ ಮಕ್ಕಳು ಬೇಡ, ದತ್ತು ಮಕ್ಕಳನ್ನ ಪಡೆದುಕೊಳ್ಳೊಣ ಎಂದು ಗಂಡನಿಗೆ, ಪತ್ನಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ ಪತಿ ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಟೆಕ್ಕಿ ಶ್ರೀಕಾಂತ್ ಹಾಗೂ ಯುವತಿ 2022 ರಲ್ಲಿ ಮದುವೆ ಆಗಿದ್ದಾರೆ. ಮಕ್ಕಳು ಮಾಡಿಕೊಳ್ಳೊಣ ಅಂತ ಗಂಡ ಶ್ರೀಕಾಂತ್ ಕೇಳಿದರೆ ಈಗ ಮಕ್ಕಳು ಬೇಡ ನಮಗೆ 60 ವರ್ಷವಾದ ಬಳಿಕ ಮಕ್ಕಳು ಮಾಡಿಕೊಳ್ಳೊಣ ಎನ್ನುತ್ತಾಳೆ, ಮುಟ್ಟಲು ಹೋದ್ರೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬ್ಲಾಕ್ ಮೇಲ್ ಮಾಡುತ್ತಾಳೆ ಪತಿ ಆರೋಪಿಸಿದ್ದಾರೆ.
ಶ್ರೀಕಾಂತ್ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡಲು ಕುಳಿತರೇ ಜೋರಾಗಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡುವುದು, ಜಗಳ ಮಾಡುತ್ತಾ ಕೆಲಸಕ್ಕೆ ಅಡ್ಡಿಪಡಿಸುವ ಕೆಲಸ ಮಾಡ್ತಾಳೆ. ಹೆಂಡತಿ ಕಾಟದಿಂದ ರೋಸಿ ಹೋಗಿದ್ದೇನೆ. ಒಂದು ದಿನವೂ ಮದ್ವೆಯಾದ ಖುಷಿಯಿಲ್ಲ. ಖರ್ಚು ಮಾಡಿದ್ದ ಹಣವೂ ಹಣ, ಬಂಗಾರವೂ ನನ್ನ ಕೈಗೆ ಸಿಕ್ತಿಲ್ಲ. ಸದ್ಯ ಇರುವ ಕೆಲಸವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದೇನೆ ಅಂತ ಪತಿ ಶ್ರೀಕಾಂತ್ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.