October 8, 2026
Thursday, October 8, 2026
spot_img

19 ರನ್‌ಗೆ 5 ವಿಕೆಟ್ ಪತನ: ಆಂಗ್ಲರ ಹೆಡೆಮುರಿ ಕಟ್ಟಿದ ಟೀಂ ಇಂಡಿಯಾ ಬೌಲರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಡ್ಜ್‌ಬಾಸ್ಟನ್ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬೌಲಿಂಗ್ ಮಾಡಲು ಇಳಿದ ಟೀಂ ಇಂಡಿಯಾ ಆರಂಭಿಕ ಹಿನ್ನಡೆಯ ನಂತರ ಅದ್ಭುತವಾಗಿ ಪುಟಿದೆದ್ದಿದೆ. ಇಂಗ್ಲೆಂಡ್ ಮೊದಲ ವಿಕೆಟ್‌ಗೆ 61 ರನ್ ಕಲೆಹಾಕಿದರೂ, ಭಾರತೀಯ ಬೌಲರ್‌ಗಳು ಕೇವಲ 19 ರನ್‌ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸಿ ಆತಿಥೇಯರನ್ನು ಬೆಚ್ಚಿಬೀಳಿಸಿದರು.

ಪ್ರಸಿದ್ಧ್ ಕೃಷ್ಣ ಬೌಲಿಂಗ್ ತಡಕಾಟಕ್ಕೆ ಬ್ರೇಕ್

ಟಿ20 ಸರಣಿಯಲ್ಲಿ ದುಬಾರಿಯಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಏಕದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಮಾರಕ ದಾಳಿ ಸಂಘಟಿಸಿದರು. ತಮ್ಮ 6 ಓವರ್‌ಗಳ ಕೋಟಾದಲ್ಲಿ 2 ಮೇಡನ್ ಸಹಿತ ಕೇವಲ 20 ರನ್ ನೀಡಿದ ಪ್ರಸಿದ್ಧ್, ಬೈಸ್ ರೂಪದಲ್ಲಿ ಬಂದ 8 ರನ್ ಹೊರತುಪಡಿಸಿ ಕೇವಲ 12 ರನ್ ಮಾತ್ರ ಬಿಟ್ಟುಕೊಟ್ಟರು.

ಒಂದೇ ಓವರ್‌ನಲ್ಲಿ ಡಬಲ್ ಶಾಕ್!

ಪಂದ್ಯದ 17ನೇ ಓವರ್‌ನಲ್ಲಿ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಧ್ವಂಸಗೊಳಿಸಿದರು. ಓವರ್‌ನ ಮೊದಲ ಎಸೆತದಲ್ಲೇ ಅಪಾಯಕಾರಿ ಜೋಸ್ ಬಟ್ಲರ್ (ಬ್ರಾರ್‌ಗೆ ಕ್ಯಾಚ್) ವಿಕೆಟ್ ಪಡೆದ ಅವರು, ನಂತರ ಬಂದ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಈ ಮಾರಕ ದಾಳಿ ಇಂಗ್ಲೆಂಡ್‌ನ ಕುಸಿತಕ್ಕೆ ಪ್ರಮುಖ ಕಾರಣವಾಯಿತು.

Must Read