Tuesday, March 28, 2023

Latest Posts

ಟ್ರಾಫಿಕ್ ಫೈನ್ ಶೇ.50ರಷ್ಟು ರಿಯಾಯಿತಿಯಲ್ಲಿ ಮತ್ತೆ 15 ದಿನ ವಿಸ್ತರಿಸಿ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯ ಸರಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ದಾಖಲಾಗಿದ್ದ ಪ್ರಕರಣಗಳ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ಅವಧಿಯನ್ನು ಮತ್ತೆ 15 ದಿನ ವಿಸ್ತರಿಸಿ ಆದೇಶಿಸಿದೆ.

ಈ ಕುರಿತಂತೆ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಸರ್ಕಾರ ದಿನಾಂಕ 11-02-2023ರವರೆಗೆ ನೀಡಲಾಗಿತ್ತು ಎಂದಿದೆ. ಬಳಿಕ ಜನರು ಕಾಲಾವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದರು.ಹೀಗಾಗಿ ಟ್ರಾಫಿಕ್ ಫೈನ್ ನ ( Traffic Fine ) ಶೇ.50ರಷ್ಟು ರಿಯಾಯಿತಿಯನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಹೇಳಿದೆ.

ಇದನ್ನು ವಾಹನ ಸವಾರರು ಸದುಪಯೋಗ ಪಡಿಸಿಕೊಂಡು, ದಂಡವನ್ನು ಪಾವತಿಸುವಂತೆ ಮನವಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!