Wednesday, March 29, 2023

Latest Posts

ಟ್ರಾಫಿಕ್ ಫೈನ್‌ನಲ್ಲಿ 50% ಆಫರ್: ಆರೇ ದಿನಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಸಂಗ್ರಹ​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಶೇ.50 ರಿಯಾಯಿತಿಯನ್ನು ಜನರು ಸದುಪಯೋಗಪಡಿಸಿಕೊಂಡಿದ್ದು, ಕಳೆದ ಆರು ದಿನಗಳಲ್ಲಿ ಒಟ್ಟಾರೆ ದಂಡ ಸಂಗ್ರಹ 50 ಕೋಟಿ ರೂ.ಗಡಿದಾಡಿದೆ.

ಜನರು ಸ್ವಯಂಪ್ರೇರಿತವಾಗಿ ದಂಡ ಪಾವತಿಸುತ್ತಿದ್ದಾರೆ. ಬುಧವಾರ ಸಹ ಸ್ಥಳೀಯ ಠಾಣೆಗಳಿಗೆ ಜನರೇ ಖುದ್ದು ಹಾಜರಾಗಿ ತಮ್ಮ ವಾಹನಗಳ ಮೇಲೆ ವಿಧಿಸಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಂಡ ಪಾವತಿಸಿದರು. ಅದೇ ರೀತಿ ಆನ್‌ಲೈನ್ ಸೇವೆ, ಕರ್ನಾಟಕ ಒನ್, ಬೆಂಗಳೂರು ಒನ್‌ನಲ್ಲಿ ದಂಡ ಪಾವತಿಸಿದ ದೃಶ್ಯ ಕಂಡು ಬಂತು.

ಬುಧವಾರ 9.06 ಕೋಟಿ ರೂ. ದಂಡ ವಸೂಲಿಯಾಗಿದೆ. ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಗುತ್ತಿದೆ. ಫೆ.11ರ ವರೆಗೂ ಇದೇ ರೀತಿ ಸಾರ್ವಜನಿಕರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!