Tuesday, March 28, 2023

Latest Posts

ದಿನಭವಿಷ್ಯ| ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ವಿಪುಲ ಅವಕಾಶ, ಬಳಸಿಕೊಳ್ಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಫಲಪ್ರದ ದಿನ. ಕಾರ್ಯದಲ್ಲಿ ಹೆಚ್ಚು ಬದ್ಧತೆ ತೋರುವಿರಿ. ಕಷ್ಟದ ಹಾದಿ ಮುಗಿದು ಸುಗಮ ಪಥ ತೋರುವುದು. ಕೌಟುಂಬಿಕ ಶಾಂತಿ.

ವೃಷಭ
ವೃತ್ತಿಯಲ್ಲಿ ಅತ್ಯಂತ ಯಶಸ್ವಿ ದಿನ. ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ವಿಪುಲ ಅವಕಾಶ. ಕುಟುಂಬದ ಜತೆಗೂ ಹೆಚ್ಚು ಕಾಲ ಕಳೆಯಲು ಮರೆಯದಿರಿ.

ಮಿಥುನ
ಸಮಾಧಾನದಿಂದ ಇರಲು ಇಂದು ಗ್ರಹಗತಿ ಅವಕಾಶ ನೀಡುವುದಿಲ್ಲ. ಏನಾದರೊಂದು ಕೆಲಸದ ಹೊರೆ ಬೀಳುತ್ತಲೇ ಇರುತ್ತದೆ. ಕೌಟುಂಬಿಕ ಕಿರಿಕಿರಿ.

ಕಟಕ
ನಿಮಗಿಂದು ಅದೃಷ್ಟದ ದಿನ. ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವೃತ್ತಿಯಲ್ಲಿ ಉಂಟಾಗಿದ್ದ ಸಮಸ್ಯೆ ತಾನಾಗಿ ಶಮನವಾಗುವುದು.

ಸಿಂಹ
ನಿಮ್ಮ ಕಾರ್ಯದಲ್ಲಿ ಹೆಚ್ಚು ಎಚ್ಚರ ವಹಿಸಿ. ತಪ್ಪುಗಳು ಘಟಿಸಬಹುದು. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ನಷ್ಟವಾಗುವ ಸಂಭವ.

ಕನ್ಯಾ
ಖಾಸಗಿ ಕಾರ್ಯ ವಾಗಲಿ, ವೃತ್ತಿಯ ಕಾರ್ಯವಾಗಲಿ ವಿವೇಕದಿಂದ ನಿರ್ಧಾರ ತೆಗೆದುಕೊಳ್ಳಿ. ಭಾವಾವೇಶಕ್ಕೆ ಒಳಗಾಗಬೇಡಿ.

ತುಲಾ
ನಿಮ್ಮ ಮುಂದಿರುವ ಗುರಿ ಸಾಧ್ಯವಾದುದೇ ಆಗಿದೆ. ಆದರೆ ನಿಮ್ಮಲ್ಲಿ ಧೈರ್ಯದ ಕೊರತೆಯಿದೆ. ಅಂಜದೆ ಮುನ್ನುಗ್ಗಿದರೆ ಯಶಸ್ಸು ಖಂಡಿತ.

ವೃಶ್ಚಿಕ
ಸಕಾಲದಲ್ಲಿ ಕೆಲಸ ಮುಗಿಸಿ. ಇಲ್ಲವಾದರೆ ಹೆಚ್ಚಿನ ಒತ್ತಡಕ್ಕೆ ಬೀಳುವಿರಿ. ನಿಮ್ಮ ಪತನವನ್ನೆ ಕೆಲವರು ಕಾಯುತ್ತಿರುತ್ತಾರೆ. ಅದಕ್ಕೆ ಅವಕಾಶ ನೀಡದಿರಿ.

ಧನು
ಹೆಚ್ಚು ಬದ್ಧತೆಯಿಂದ ಕೆಲಸ ಮಾಡುವಿರಿ. ಮನೆಯಲ್ಲಿ ಮೂಡಿದ್ದ ಅಸಮಾಧಾನ, ಅಶಾಂತಿ ನಿವಾರಣೆ. ಸೌಹಾರ್ದತೆ ನೆಲೆಸುವುದು. ಎಲ್ಲರ ಸಹಕಾರ.

ಮಕರ
ಹಣದ ಸಮಸ್ಯೆ ನೀಗುವುದು. ಆರ್ಥಿಕ ಲಾಭ ಪಡೆಯುವಿರಿ.  ಕೆಲವರೊಂದಿಗಿನ ಜಗಳವು ಮನಸ್ಸಿನ ನೆಮ್ಮದಿ ಕಲಕಿದರೂ ಸಂಜೆ ವೇಳೆಗೆ ಸಮಾಧಾನ.

ಕುಂಭ
ವಿಶ್ವಾಸ ವೃದ್ಧಿಸುವ ಬೆಳವಣಿಗೆ. ಯಾವುದೋ ವಿಷಯದಲ್ಲಿ ಮನದಲ್ಲಿ ಮೂಡಿದ್ದ ಆತಂಕ ನಿವಾರಣೆ. ದೈವಬಲ ನಿಮ್ಮೊಂದಿಗಿದೆ.

ಮೀನ
ಕೆಲವಾರು ಅನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ನೀವೂ ಸೂಕ್ತ ನಿರ್ಧಾರ ತಾಳುವ ಮೂಲಕ ಅವನ್ನು ಸರಿಯಾಗಿ ನಿಭಾಯಿಸುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!