50 ವರ್ಷದ ಬಳಿಕವೂ ಚಂದ್ರನಲ್ಲಿ ಹಾಗೆಯೇ ಉಳಿದಿದೆ ʼಮಹಾಜಿಗಿತದʼ ಹೆಜ್ಜೆಗುರುತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜುಲೈ 20, 1969.. ಈ ದಿನ ಮಾನವ ಕುಲದ ಇತಿಹಾಸದಲ್ಲಿ ಮರೆಯಲಾಗದ ದಿನ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ಅಪೋಲೋ-11’ ನೌಕೆ ಏರಿ ಚಂದ್ರನಲ್ಲಿಗೆ ಹೋಗಿದ್ದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್, ಬುಝ್ ಆಲ್ಡ್ರಿನ್ ಮತ್ತು ಮೈಕಲ್ ಕಾಲಿನ್ಸ್ ಚಂದ್ರನ ಮೇಲೆ ಮೊಟ್ಟಮೊದಲ ಬಾರಿಗೆ ʼಮಾನವʼ ಹೆಜ್ಜೆಯನ್ನು ಇರಿಸಿದ್ದರು. ಈ ಘಟನೆ ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸಿತ್ತು.

ಈ ಮಹತ್ಸಾದನೆಗೀಗ ಇದೀಗ 50 ವರ್ಷಗಳೇ ಸಂದಿದೆ. ಈ ದಿನದ ಸ್ಮರಣಾರ್ಥ ನಾಸಾ ಬಿಡುಗಡೆಗೊಳಿಸಿರುವ ವಿಡಿಯೋವೊಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ. ಇದರಲ್ಲಿ ಮಾನವನ ಮೊದಲ ಹೆಜ್ಜೆಯ ಗುರುತುಗಳು ಕುಳಿ ಚಂದ್ರನ ಮೇಲ್ಮೈಯಲ್ಲಿ ಹಾಗೆಯೇ ಉಳಿದಿರುವುದನ್ನು ಕಾಣಬಹುದಾಗಿದೆ.

ಹೌದು.. ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ ಅಪೊಲೊ 11 ಗಗನಯಾತ್ರಿಗಳು ಬಿಟ್ಟುಹೋದ ಮೊದಲ ಹೆಜ್ಜೆಗಳ ಉಪಸ್ಥಿತಿಯನ್ನು ತೋರಿಸುವ ತುಣುಕನ್ನು ನಾಸಾ ಬಿಡುಗಡೆ ಮಾಡಿದೆ.  ನಾಸಾ ಉಡಾವಣೆ ಮಾಡಿರುವ ಲೂನಾರ್ ರೀಕಾನೈಸೆನ್ಸ್ ಆರ್ಬಿಟರ್ (LRO) ಗಗನಯಾತ್ರಿಗಳು ಕಾಲಿಟ್ಟಿದ್ದ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿದ್ದು, ಚಂದ್ರನ ಮೇಲಿನ ಐತಿಹಾಸಿಕ ನಡಿಗೆಯ ಗುರುತು ಐದು ದಶಕಗಳ ನಂತರವೂ ಹಾಗೆಯೇ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!