ಬರಾಕ್ ಒಬಾಮಾ ಸಹಿತ 500 ಅಮೆರಿಕನ್ನರಿಗೆ ಪ್ರವೇಶಕ್ಕೆ ನಿರ್ಬಂಧ ಹೇಳಿದ ರಷ್ಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (US President Barack Obama) ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿರ್ಬಂಧಿಸಿ ರಷ್ಯಾ (Rsussia) ಆದೇಶ ಪ್ರಕಟಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ಸರಕಾರ ರಷ್ಯಾದ ಮೇಲೆ ವಿಧಿಸುತ್ತಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಅಮೆರಿಕದ 500 ಮಂದಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಉಕ್ರೇನ್‌ (Ukraine) ಮೇಲೆ ದಾಳಿ ಮಾಡುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಕುಗ್ಗಿಸಲು ಅಮೆರಿಕ ಮತ್ತು ಯುರೋಪ್‌ ದೇಶಗಳು ನಾನಾ ಕ್ರಮಗಳನ್ನು ಜಾರಿ ಮಾಡುತ್ತಿವೆ. ಈ ಕ್ರಮದ ಭಾಗವಾಗಿ ಶುಕ್ರವಾರ ಅಮೆರಿಕ ರಷ್ಯಾದ ನೂರಕ್ಕೂ ಅಧಿಕ ಕಂಪನಿಗಳನ್ನು ವ್ಯಕ್ತಿಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಿದೆ. ಈ ಕ್ರಮಕ್ಕೆ ತಿರುಗೇಟು ಎನ್ನುವಂತೆ ರಷ್ಯಾ ಈಗ ಅಮೆರಿಕದ 500 ಮಂದಿಗೆ ನಿರ್ಬಂಧ ಹೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!