ನಾವು ಅಧಿಕಾರಕ್ಕೆ ಬಂದರೆ ಮೊಬೈಲ್‌ ಡೇಟಾಗೆ 500 ರೂ. ಫ್ರೀ: ಅಖಿಲೇಶ್‌ ಯಾದವ್‌ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ(Lok Sabha Election)ಗೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಮೊಬೈಲ್ ಡೇಟಾಗೆ (Mobile Data) ಉಚಿತವಾಗಿ 500 ರೂ. ಹಣವನ್ನು ಎಲ್ಲಾ ಬಿಪಿಎಲ್‌ (BPL) ಪಡಿತರ ಕಾರ್ಡ್‌ ಹೊಂದಿದ ಗ್ರಾಹಕರಿಗೆ ನೀಡಲಾಗುವುದು ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ (Akhilesh Yadav) ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಉಚಿತ ಲ್ಯಾಪ್‌ಟಾಪ್ ನೀಡಿದ ನಂತರ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದು ಅಧಿಕಾರಕ್ಕೆ ಏರಿದರೆ ಮೊಬೈಲ್‌ ಡೇಟಾಗೆ 500 ರೂ. ನೀಡಲಾಗುವುದು ಎಂದು ತಿಳಿಸಿದರು.
ಎಸ್‌ಪಿ INDIA ಒಕ್ಕೂಟದ ಭಾಗವಾಗಿದ್ದು, ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್‌ ಜೊತೆಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದೆ.

ಪ್ರಣಾಳಿಕೆಯಲ್ಲಿ ಏನಿದೆ?
– 2025ರ ಒಳಗಡೆ ಜಾತಿ ಆಧಾರಿತ ಸಮೀಕ್ಷೆ
– ‘ಅಗ್ನಿಪಥ್‌’ ಯೋಜನೆ ರದ್ದು- ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿಯನ್ನು ಪರಿಚಯ
– ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
– ಸ್ವಾಮಿನಾಥನ್ ವರದಿಯಂತೆ ಕೃಷಿ ಬೆಳೆಗಳಿಗೆ ಎಂಎಸ್‌ಪಿ ಗೆ ಕಾನೂನು ಖಾತರಿ
– ಅರೆಸೇನಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಹಳೆಯ ಪಿಂಚಣಿ ಯೋಜನೆ (OPS) ಪ್ರಾರಂಭ
– ಎಲ್ಲಾ ಭೂರಹಿತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ 5,000 ರೂಪಾಯಿ ಪಿಂಚಣಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!