ಚಿಕಿತ್ಸೆಗೆ ಬಂದು 500 ರೂ. ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ: ಇದೊಂದು ಫನ್ನಿ ಮೂಮೆಂಟ್‌ ಎಂದ ಡಾಕ್ಟರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಾಕ್ಟರ್‌ ಬಳಿ ಚಿಕಿತ್ಸೆಗೆ ಬಂದ ರೋಗಿ ಓರ್ವ 500 ರೂ. ಮುಖಬೆಲೆಯ ನಕಲಿ ನೋಟು (500 rs Fake Note) ಕೊಟ್ಟು ಯಾಮಾರಿಸಿದ ಘಟನೆ ನಡೆದಿದೆ.

ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ ಡಾ. ಮಾನನ್‌ ವೊರ ಅವರು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ವೈದ್ಯಕೀಯ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರು ನಕಲಿ ನೋಟನ್ನು ಕೊಟ್ಟು ಹೋಗಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಅದನ್ನು ಸರಿಯಾಗಿ ಗಮನಿಸಿಲ್ಲ. ಕೊನೆಗೆ ಅದು ನನ್ನ ಬಳಿಗೆ ಬಂದಿದೆ. ಈ ನೋಟನ್ನು ನೋಡಿ ನನಗೆ ನಗು ಬಂತು. ಆ ರೋಗಿ ನನ್ನ ಬಳಿ ದರೋಡೆ ಮಾಡಿದ್ದಾರೆ. ಆದರೂ ಇದು ಫನ್ನಿಯಾಗಿದೆ. ಈ ನೆನಪಿಗಾಗಿ ಆ ನೋಟನ್ನು ಇಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!