ನೀವು ಸಲಿಂಗ ಕಾಮಿನಾ? ನೆಟ್ಟಿಗನ ಪ್ರಶ್ನೆಗೆ ಕರಣ್ ಜೋಹರ್ ಏನಂದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ನ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅಂದ್ರೆ ಅಲ್ಲಿ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತೆ.

51 ವರ್ಷದ ಕರಣ್ ಜೋಹರ್ ಇನ್ನೂ ಮದುವೆಯಾಗಿಲ್ಲ. ಬಾಡಿಗೆ ತಾಯಿ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದು ಸಾಕುತ್ತಿದ್ದಾರೆ. ಹೀಗಾಗಿ ಅವರು ಹೋದಲ್ಲಿ ಎಲ್ಲಾ ಕಡೆ ​ ಅವರ ಲೈಂಗಿಕ ಆಸಕ್ತಿ ಬಗ್ಗೆ ಪದೇ ಪದೇ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣ ಕೂಡ ಅದಕ್ಕೆ ಹೊರತಲ್ಲ. ಇದೀಗ ನೆಟ್ಟಿಗರೊಬ್ಬರು ಕರಣ್​ ಜೋಹರ್​ ಅವರಿಗೆ ನೇರವಾಗಿ ನೀವು ಸಲಿಂಗ ಕಾಮಿನಾ ಪ್ರಶ್ನೆ ಕೇಳಿದ್ದಾರೆ.


ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಅಭಿಮಾನಿಗಳ ನಡುವೆ ಮಾತುಕತೆ ಆಗುತ್ತಾ ಇರುತ್ತೆ. ಈಗ ಸೋಶಿಯಲ್​ ಮೀಡಿಯಾಗೆ ಥ್ರೆಡ್ಸ್​ ಎಂಟ್ರಿ ನೀಡಿದೆ. ಕರಣ್​ ಜೋಹರ್​ ಕೂಡ ಇದರಲ್ಲಿ ಖಾತೆ ತೆರೆದಿದ್ದಾರೆ. ಹಾಗಾಗಿ ಅವರು ಶನಿವಾರ (ಜುಲೈ 8) ಹತ್ತು ನಿಮಿಷಗಳ ಕಾಲ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದರು. ಆಗ ಅವರಿಗೆ ಸಲಿಂಗ ಕಾಮಿನಾ ಎನ್ನುವ ಪ್ರಶ್ನೆ ಎದುರಾಗಿದೆ.

‘ನೀವು ಸಲಿಂಗ ಕಾಮಿ ಹೌದಲ್ಲವೇ’ ಎಂದು ನೆಟ್ಟಿಗರೊಬ್ಬರು ಯಾವುದೇ ಮುಲಾಜಿಲ್ಲದೇ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕರಣ್​ ಜೋಹರ್​ ಕೊಟ್ಟ ಉತ್ತರ ಕೂಡ ವೈರಲ್ ಆಗಿದೆ. ‘ನಿಮಗೆ ಆಸಕ್ತಿ ಇದೆಯೇ’ ಎಂದು ಮರುಪ್ರಶ್ನೆ ಹಾಕಿದ್ದಾರೆ. ಇದಲ್ಲದೇ ಇನ್ನೂ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!