Friday, February 3, 2023

Latest Posts

ಶಬರಿಮಲೆ ಯಾತ್ರಾರ್ಥಿಗಳ ಜೊತೆ 500 ಕಿ.ಮೀ. ಕಳೆದರೂ ಇನ್ನೂ ಹೆಜ್ಜೆ ಹಾಕುತ್ತಿದೆ ಈ ಶ್ವಾನ!

ಹೊಸದಿಗಂತ ಡಿಜಿಟಲ್:

ಶ್ರೀಕ್ಷೇತ್ರ ಶಬರಿಮಲೆಗೆ ಯಾತ್ರೆ ಹೊರಟಿದ್ದವರ ಜೊತೆಗೆ ಶ್ವಾನವೊಂದು ಬರೋಬ್ಬರಿ 500 ಕಿ.ಮೀ. ಜೊತೆಯಾಗಿ ಹೆಜ್ಜೆ ಹಾಕಿ ಅಚ್ಚರಿ ಮೂಡಿಸುತ್ತಿದೆ.

ಧಾರವಾಡದ ಮಂಗಳಗಟ್ಟಿ ಗ್ರಾಮದಿಂದ ಶಬರಿಮಲೆಗೆ ಮೂವರು ಅಯ್ಯಪ್ಪ ಭಕ್ತರು ಪಾದಯಾತ್ರೆ ಹೊರಟಿದ್ದಾರೆ. ಈ ಶ್ವಾನ ಇದೀಗ ಅವರನ್ನು ಹಿಂಬಾಲಿಸುತ್ತಿದೆ. ಆರಂಭದಲ್ಲಿ ಶ್ವಾನವನ್ನು ಹಿಂದಕ್ಕೆ ಓಡಿಸಲು ಯತ್ನಿಸಲಾಯಿತಾದರೂ ಶ್ವಾನ ಮಾತ್ರ ಜಪ್ಪಯ್ಯ ಅಂದರೂ ಕೇಳದೆ ಜೊತೆಯಾಗಿಯೇ ಹೊರಟು ಅಚ್ಚರಿ ಮೂಡಿಸಿದೆ. ಮಂಜು ಕಮ್ಮಾರ, ರವಿ ಹಾಗೂ ನಾಗನಗೌಡ ಎಂಬ ಮೂವರು ಯಾತ್ರಾರ್ಥಿಗಳಿಗೆ ಈ ಶ್ವಾನ ಧಾರವಾಡದ ಬೈಪಾಸ್ ರಸ್ತೆಯಲ್ಲಿ ಸಿಕ್ಕಿತ್ತು. ಅಲ್ಲಿ ಅವರು ಊಟಕ್ಕೆ ಕುಳಿತಾಗ ಶ್ವಾನಕ್ಕೂ ಆಹಾರ ಹಾಕಿದ್ದರು. ಅದಾದ ಬಳಿಕ ಶ್ವಾನ ಅವರ ಬೆನ್ನುಬಿಟ್ಟಿಲ್ಲ!

ಪ್ರಾಣಿ ಪ್ರಿಯರಾದ ಈ ಮೂವರೂ ಈಗ ಶ್ವಾನವನ್ನು ಕೂಡಾ ತಮ್ಮ ಜೊತೆಯಲ್ಲಿ ಯಾತ್ರೆಯುದ್ದಕ್ಕೂ ಕರೆದೊಯ್ಯಲು ನಿರ್ಧರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!