ಹೊಸದಿಗಂತ ವರದಿ, ಬೀದರ್:
ನಗರದಲ್ಲಿ ರೂ. ೫೦೦ ಮುಖ ಬೆಲೆಯ ಜಾಲಿ (ನಕಲಿ) ನೋಟಿನ ಹಾವಳಿ ಹೆಚ್ಚಾಗಿದ್ದು ಶುಕ್ರವಾರ ನಗರದ ಹಳೆಯ ಬಡಾವಣೆಯಲ್ಲಿ ವೃದ್ಧರೊಬ್ಬರಿಗೆ ಚಿಲ್ಲರೆ ನೆಪದಲ್ಲಿ ಜಾಲಿ ರೂ.೫೦೦ ನೋಟು ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಅದೇ ರೀತಿಯಲ್ಲಿ ಕಿರಾಣಿ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಸಾಮಾನು ಖರೀದಿಸಿ ಜಾಲಿ ರೂ.೫೦೦ ನೋಟು ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.