ಹೊಸದಿಗಂತ ವರದಿ, ಮುಂಡಗೋಡ:
ಟಿಬೆಟಿಯನ್ ಯೋಧರೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಸಿಪಿಐ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿದ ಘಟನೆ ಶುಕ್ರವಾರ ಟಿಬೆಟಿಯನ್ ಕಾಲೂನಿಯಲ್ಲಿ ನಡೆದಿದೆ.
ತಾಲೂಕಿನ ಕ್ಯಾಂಪ್ ನಂಬರ ೭ರ ನೇಮಾ ಶ್ರೀರಿಂಗ(೪೮) ಮೃತ ಯೋಧರಾಗಿದ್ದಾರೆ. ಇವರು ಭಾರತೀಯ ಸೈನ್ಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಟಿಬೆಟಿಯನ್ ಕಾಲೂನಿಗೆ ಅವರ ಮೃತದೇಹ ಬಂದಿತ್ತು. ಇಲ್ಲಿನ ಸಿಪಿಐ ರಂಗನಾಥ ನೀಲಮ್ಮವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು