ಹೊಸದಿಗಂತ ಡಿಜಿಟಲ್ ಡೆಸ್ಕ್:
2012ರಲ್ಲಿ ಕಳವಾಗಿದ್ದ 500 ವರ್ಷಗಳ ಹಳೆಯ ಭಗವಾನ್ ಆಂಜನೇಯನ ವಿಗ್ರಹ ಇನ್ನೇನು ಕೆಲವು ದಿನಗಳಲ್ಲಿ ಭಾರತಕ್ಕೆ ವಾಪಾಸ್ ತರಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಕಿಶನ್ ರೆಡ್ಡಿ, ತಮಿಳುನಾಡಿನಲ್ಲಿ ಕಳವಾಗಿದ್ದ 500 ವರ್ಷ ಹಳೆಯ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಾಸ್ ತರಲಾಗುತ್ತದೆ. ಈಗಾಗಲೇ ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿ ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಅರಿಯಾಲೂರ್ ನಲ್ಲಿನ ವಿಗ್ರಹವನ್ನು 2012ರಲ್ಲಿ ಕದ್ದು, ವಿದೇಶಕ್ಕೆ ಸಾಗಿಸಲಾಗಿತ್ತು. ಈ ಆಂಜನೇಯನ ವಿಗ್ರಹ ಸುಮಾರು 14-15ನೇ ಶತಮಾನದ್ದಾಗಿದ್ದು, ಸದ್ಯ ಆಸ್ಟ್ರೇಲಿಯಾದ ಖಾಸಗಿ ಖರೀದಿದಾರರೊಬ್ಬರ ಸ್ವಾಧೀನದಲ್ಲಿ ಇರುವುದು ತಿಳಿದುಬಂದಿದೆ.
ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರಲ್ಲಿ ಕಳವು ಮಾಡಲಾಗಿತ್ತು.
2014ರಲ್ಲಿ ಆಂಜನೇಯನ ವಿಗ್ರಹವನ್ನು 37500 ಡಾಲರ್ ಕೊಟ್ಟು ಹರಾಜಿನಲ್ಲಿ ಖರೀದಿ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ತಮಿಳುನಾಡು ಪೊಲೀಸರು ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು. ಈಗ ವಿಗ್ರಹ ಭಾರತಕ್ಕೆ ಕರೆತರಲಾಗುತ್ತದೆ.