ಪೂರ್ವ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯ, ಬೇರೆ ದೇಶಗಳು ಅಡ್ಡಬಂದ್ರೆ ಪರಿಣಾಮ ಭೀಕರ ಎಂಬ ವಾರ್ನಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ಮತ್ತು ರಷ್ಯಾ ಗಡಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು ತೀರ್ವ ಸ್ವರೂಪ ಪಡೆದಿದ್ದು, ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ, ಬೇರೆ ದೇಶಗಳು ಅಡ್ಡಬಂದರೆ ಇದರ ಪರಿಣಾಮ ಭೀಕರ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾ ಮಿಲಿಟರಿ ಕಾರ್ಯಾಚರಣೆ ಕ್ರಮಕ್ಕೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ಎಂದಿಗೂ ಕಂಡಿಲ್ಲದ ಭೀಕರ ಪರಿಣಾಮ ಎದುರಿಸಬೇಕಾದೀತು ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ಕೆಲವೇ ಗಂಟೆಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಲಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಹೇಳಿಕೆ ನೀಡಿದ ಬೆನ್ನಲ್ಲೇ, ಪುಟಿನ್ ಮಿಲಿಟರಿ ಕಾರ್ಯಾಚರಣೆ ಮಾಡುವಂತೆ ತನ್ನ ಸೈನಿಕರಿಗೆ ಸೂಚಿಸಿದ್ದಾರೆ.

ರಷ್ಯಾ ಸಂಸತ್ತಿನ ಮೇಲ್ಮನೆಯು ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಮತ್ತು ಎರಡು ದೇಶಗಳ ನಡುವಿನ ಗಡಿಭಾಗದಲ್ಲಿ ಸೇನೆ ಜಮಾವಣೆ ಮಾಡಲು ಪುಟಿನ್‌ಗೆ ಸಮ್ಮತಿ ನೀಡಿದ ಬೆನ್ನಲ್ಲೇ ಉಕ್ರೇನ್ ವಿರುದ್ಧ ಸೇನಾ ಕಾರ್ಯಚರಣೆ ಘೋಷಿಸಲಾಗಿದೆ.

ನಾಗರಿಕರನ್ನು ರಕ್ಷಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ಉಕ್ರೇನ್‌ನಿಂದ ಬಂದ ಬೆದರಿಕೆಗಳಿಗೆ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದೇವೆ. ನಮಗೆ ಉಕ್ರೇನ್ ವಶಪಡಿಸಿಕೊಳ್ಳುವ ಉದ್ದೇಶ ಇಲ್ಲ. ಆದರೆ ಈ ರಕ್ತಪಾತದ ಹೊಣೆಯನ್ನು ಉಕ್ರೇನ್ ಸರ್ಕಾರ ಹೊರಲಿದೆ ಎಂದು ಪುಟಿನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!