ಭಾರತದಲ್ಲಿ ಕಳವಾಗಿದ್ದ 500 ವರ್ಷಗಳ ಹಳೆಯ ಆಂಜನೇಯನ ವಿಗ್ರಹ ಆಸ್ಟ್ರೇಲಿಯಾದಲ್ಲಿ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2012ರಲ್ಲಿ ಕಳವಾಗಿದ್ದ 500 ವರ್ಷಗಳ ಹಳೆಯ ಭಗವಾನ್‌ ಆಂಜನೇಯನ ವಿಗ್ರಹ ಇನ್ನೇನು ಕೆಲವು ದಿನಗಳಲ್ಲಿ ಭಾರತಕ್ಕೆ ವಾಪಾಸ್‌ ತರಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಕಿಶನ್‌ ರೆಡ್ಡಿ, ತಮಿಳುನಾಡಿನಲ್ಲಿ ಕಳವಾಗಿದ್ದ 500 ವರ್ಷ ಹಳೆಯ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಾಸ್‌ ತರಲಾಗುತ್ತದೆ. ಈಗಾಗಲೇ ಯುಎಸ್​ ಹೋಮ್​ಲ್ಯಾಂಡ್​ ಸೆಕ್ಯೂರಿಟಿ ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಅರಿಯಾಲೂರ್‌ ನಲ್ಲಿನ ವಿಗ್ರಹವನ್ನು 2012ರಲ್ಲಿ ಕದ್ದು, ವಿದೇಶಕ್ಕೆ ಸಾಗಿಸಲಾಗಿತ್ತು. ಈ ಆಂಜನೇಯನ ವಿಗ್ರಹ ಸುಮಾರು 14-15ನೇ ಶತಮಾನದ್ದಾಗಿದ್ದು, ಸದ್ಯ ಆಸ್ಟ್ರೇಲಿಯಾದ ಖಾಸಗಿ ಖರೀದಿದಾರರೊಬ್ಬರ ಸ್ವಾಧೀನದಲ್ಲಿ ಇರುವುದು ತಿಳಿದುಬಂದಿದೆ.
ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್​ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರಲ್ಲಿ ಕಳವು ಮಾಡಲಾಗಿತ್ತು.
2014ರಲ್ಲಿ ಆಂಜನೇಯನ ವಿಗ್ರಹವನ್ನು 37500 ಡಾಲರ್‌ ಕೊಟ್ಟು ಹರಾಜಿನಲ್ಲಿ ಖರೀದಿ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ತಮಿಳುನಾಡು ಪೊಲೀಸರು ಯುಎಸ್ ಹೋಮ್​​ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು. ಈಗ ವಿಗ್ರಹ ಭಾರತಕ್ಕೆ ಕರೆತರಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!