ಪತಿಯನ್ನು ಕೊಲೆ ಮಾಡಿದ್ರೆ 50,000 ಬಹುಮಾನ: ವಾಟ್ಸಾಪ್ ಸ್ಟೇಟಸ್‌ನಲ್ಲಿ ಸುಫಾರಿ ಕೊಟ್ಟ ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತಿಯನ್ನು ಕೊಲೆ ಮಾಡಿದ್ರೆ 50,000 ರೂ. ಬಹುಮಾನವನ್ನು ನೀಡುತ್ತೇನೆ ಎಂದು ಪತ್ನಿ ವಾಟ್ಸಾಪ್ ಸ್ಟೇಟಸ್ ಹಾಕಿದ ಘಟನೆ ಆಗ್ರಾದ ಬಾಹ್ ಜಿಲ್ಲೆಯಲ್ಲಿ ನಡೆದಿದೆ.

ಪತಿ ಪತ್ನಿಯ ಸ್ಟೇಟಸ್ ನೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಈ ಹಿಂದೆ ಪತ್ನಿಯ ಸ್ನೇಹಿತರೊಬ್ಬರು ಬೆದರಿಕೆ ಹಾಕಿದ್ದರು ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬಹ್ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ.

ಪತಿ ಜುಲೈ 9, 2022 ರಂದು ಮಧ್ಯಪ್ರದೇಶದ ಭಿಂಡ್‌ನ ಹಳ್ಳಿಯೊಂದರ ಮಹಿಳೆಯನ್ನು ವಿವಾಹವಾದರು. ಸ್ವಲ್ಪ ಸಮಯದ ನಂತರ, ಅವರ ನಡುವೆ ಜಗಳ ಮತ್ತು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಐದು ತಿಂಗಳ ಕಾಲ ಅತೃಪ್ತಿಕರ ದಾಂಪತ್ಯದ ನಂತರ, ಡಿಸೆಂಬರ್ 2022 ರಲ್ಲಿ, ಮಹಿಳೆ ಬಹ್‌ನಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ತನ್ನ ಹೆತ್ತವರ ಮನೆಗೆ ಹಿಂದಿರುಗಿದಳು. ಅಂದಿನಿಂದ ಮಹಿಳೆ ತನ್ನ ಪೋಷಕರೊಂದಿಗೇ ಇದ್ದಾಳೆ. ಇದೀಗ ದೂರಿನ ಪ್ರಕಾರ ಮಹಿಳೆ ಭಿಂಡ್‌ನ ಪೊಲೀಸ್ ಠಾಣೆಯಲ್ಲಿ ಜೀವನಾಂಶ ದಾವೆ ಹೂಡಿದ್ದಾರೆ.

ಡಿಸೆಂಬರ್ 21, 2023 ರಂದು ಭಿಂಡ್‌ನಿಂದ ಹಿಂದಿರುಗುತ್ತಿದ್ದಾಗ ತನ್ನ ಮಾವ- ಅತ್ತೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ಹೇಳಿಕೊಂಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಆತನ ಪತ್ನಿ ತನ್ನ ಪತಿಯನ್ನು ಕೊಲ್ಲುವ ವ್ಯಕ್ತಿಗೆ ₹ 50,000 ಬಹುಮಾನ ನೀಡುವುದಾಗಿ ವಾಟ್ಸಾಪ್ ಸ್ಟೇಟಸ್ ಅನ್ನು ಹಂಚಿಕೊಂಡಿದ್ದಾಳೆ.

‘ಪತಿಯನ್ನು ಕೊಂದವರಿಗೆ ₹ 50,000 ಬಹುಮಾನ ನೀಡಲಾಗುವುದು’ ಎಂದು ಪತ್ನಿಯ ಸ್ಟೇಟಸ್​​ನಲ್ಲಿ ಬರೆಯಲಾಗಿದೆ ಎಂದು ದಾಖಲಾದ ದೂರಿನಲ್ಲಿ ಪತಿ ಉಲ್ಲೇಖಿಸಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!