ಕೊಲಂಬಿಯಾ ಜೈಲು ಗಲಭೆ: 51 ಮಂದಿ ಸಾವು, 24 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಕೊಲಂಬಿಯಾ ನಗರದ ಟೊಲುವಾದಲ್ಲಿನ ಜೈಲಿನಲ್ಲಿ ಮಂಗಳವಾರ ನಡೆದ ಗಲಭೆಯಲ್ಲಿ ಸುಮಾರು 51 ಕೈದಿಗಳು ಸಾವನ್ನಪ್ಪಿದ್ದು,  24 ಮಂದಿ ಗಾಯಗೊಂಡಿದ್ದಾರೆ. ಕೊಲಂಬಿಯಾದ ಮಂತ್ರಿ ವಿಲ್ಸನ್ ರೂಯಿಜ್ ಪ್ರಕಾರ, ಬೆಳಗಿನ ಜಾವ  2 ಗಂಟೆ ಸುಮಾರಿಗೆ (ಸ್ಥಳೀಯ ಸಮಯ) ಕೈದಿಗಳ ನಡುವೆ ಜಗಳ ಪ್ರಾರಂಭವಾಯಿತು ಎಂದಿದ್ದಾರೆ. ಜಗಳದ ಸಮಯದಲ್ಲಿ ಓರ್ವ ಕೈದಿ ಹಾಸಿಗೆಗೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆ ಜೈಲು ಪೂರ್ತಿ ಆವರಿಸಿ ಐವತ್ತು ಜನರ ಸಾವಿಗೆ ಕಾರಣವಾಗಿದೆ.

ಜೈಲಿನ ಅಧಿಕಾರಿಗಳು ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಸಫಲವಾಗಲಿಲ್ಲ, ಜ್ವಾಲೆ ತುಂಬಾ ಪ್ರಬಲವಾಗಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ನಾವು ಅಗ್ನಿಶಾಮಕ ದಳದ ಸಿಬ್ಬಂದಿ ಬರುವವರೆಗೆ ಕಾಯಬೇಕಾಯಿತು ಎಂದು ಅಲ್ಲಿನ ಅಧಿಕಾರಿ ತಿಳಿಸಿದ್ದಾರೆ.

ಕೊಲಂಬಿಯಾದ ಕಾರಾಗೃಹಗಳು ಕಿಕ್ಕಿರಿದು ತುಂಬಿವೆ. ಸರಾಸರಿ ಸಾಮರ್ಥ್ಯಕ್ಕಿಂತ 20 ರಷ್ಟು ಹೆಚ್ಚು ಜನಸಂಖ್ಯೆ ಹೊಂದಿವೆ ಎಂದು ರೂಯಿಜ್ ತಿಳಿಸಿದ್ದಾರೆ. ಆದರೆ, ಟೊಲುವಾದಲ್ಲಿ ಬೆಂಕಿ ಕಾಣಿಸಿಕೊಂಡ ಸೆರೆಮನೆಯು ಸಾಮರ್ಥ್ಯಕ್ಕಿಂತ 17ರಷ್ಟು ಕಡಿಮೆಯಿದೆ. ಇದು ದೇಶದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಜೈಲುಗಳಲ್ಲಿ ಒಂದಾಗಿದೆ ಎಂದರು. ಈ ಘಟನೆಯು ದೇಶದ ಇತಿಹಾಸದಲ್ಲಿ ನಡೆದ ಮಾರಣಾಂತಿಕ ಘಟನೆಗಳಲ್ಲಿ ಒಂದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಾರಾಗೃಹಗಳಲ್ಲಿ ಮಾರಣಾಂತಿಕ ಹೋರಾಟ ಮತ್ತು ಗಲಭೆಗಳು ನಡೆಯುತ್ತಲೇ ಇವೆ. ಮಾರ್ಚ್ 2020 ರಲ್ಲಿ, ಬೊಗೋಟಾದ ಪಿಕೋಟಾ ಸೆರೆಮನೆಯಲ್ಲಿ ನಡೆದ ಗಲಭೆಯಲ್ಲಿ 24 ಕೈದಿಗಳು ಮರಣಹೊಂದಿದ್ದರು. 2022 ಮೇ 10ರಂದು ಈಕ್ವೆಡಾರ್‌ ಜೈಲು ಗಲಭೆಯಲ್ಲಿ 43 ಕೈದಿಗಳು ಸಾವನ್ನಪ್ಪಿದ್ರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!