ತಂದೆಯ ಬಂದೂಕಿನಲ್ಲಿ ಆಟವಾಡುತ್ತಾ ಪುಟ್ಟ ಬಾಲಕಿಯನ್ನು ಗುಂಡಿಕ್ಕಿ ಕೊಂದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅಮೆರಿಕಾದ ಫ್ಲೋರಿಡಾದಲ್ಲಿ ಎಂಟು ವರ್ಷದ ಬಾಲಕನೊಬ್ಬ ತನ್ನ ತಂದೆಯ ಗನ್‌ನೊಂದಿಗೆ ಆಟವಾಡುತ್ತಿದ್ದ ವೇಳೆ ಪುಟ್ಟ ಬಾಲಕಿಯನ್ನು ಗುಂಡಿಕ್ಕಿ ಕೊಂದು, ಅಲ್ಲಿಯೇ ಇದ್ದ ಇನ್ನೋರ್ವ ಅಂಬೆಗಾಲಿಡುವ ಬಾಲೆಯನ್ನು ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ರೋಡ್ರಿಕ್ ರಾಂಡಲ್(45) ಎಂಬಾತನನ್ನು ಬಂಧಿಸಲಾಗಿದೆ. ರೋಡ್ರಿಕ್ ನನ್ನು ನಿರ್ಲಕ್ಷ್ಯ ಧೋರಣೆ ಹಾಗೂ ಬಂದೂಕು ಹೊಂದಿದ್ದ ವಿಚಾರವನ್ನು ಮುಚ್ಚಿಟ್ಟ ಆರೋಪದ ಮೇರೆಗೆ ಬಂಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ರಾಂಡಾಲ್ ತನ್ನ ಗೆಳತಿಯನ್ನು ಹೋಟೆಲ್‌ ನಲ್ಲಿ ಭೇಟಿಯಾಗಿದ್ದ. ಅವನು ತನ್ನ ಮಗನನ್ನು ಕರೆತಂದಿದ್ದರೆ, ಅವನ ಗೆಳತಿ ತನ್ನ ಎರಡು ವರ್ಷದ ಮತ್ತು ಒಂದು ವರ್ಷದ ಮಗಳನ್ನು ಕರೆದುಕೊಂಡು ಬಂದಿದ್ದಳು. ಈ ಸಂದರ್ಭದಲ್ಲಿ ರಾಂಡಾಲ್ ತನ್ನ ಗನ್‌ ಅನ್ನು ಅಲ್ಲಿಯೇ ಬಚ್ಚಿಟ್ಟಿದ್ದ. ಈ ಪುಟ್ಟ ಮಕ್ಕಳನ್ನು ಆಟವಾಡಿಕೊಳ್ಳಲು ಬಿಡಲಾಗಿತ್ತು. ತಂದೆ ಆಯುಧವನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ಎಂದು ತಿಳಿದ ಮಗ ಬಾಲಕಿಯರ ತಾಯಿ ಮಲಗಿದ್ದಾಗ ಅದನ್ನು ಹೊರತೆಗೆದು ಆಟವಾಡಲು ಆರಂಭಿಸಿದ.
ಈ ಸಂದರ್ಭದಲ್ಲಿ ಒಂದು ವರ್ಷದ ಅಂಬೆಗಾಲಿಡುವ ಮಗುವಿನ ಮೇಲೆ ಒಂದು ಸುತ್ತು ಗುಂಡು ಹಾರಿಸಿ ಕೊಂದಿದ್ದಾನೆ. ಆ ಬಳಿಕ  ಮತ್ತೊಂದು ಮಗುವಿನ ಮೇಲೂ ದಾಳಿ ನಡೆಸಿ ಗಾಯಗೊಳಿಸಿದ್ದಾನೆ.
ಅಮೆರಿಕದಲ್ಲಿ ಅಪ್ರಾಪ್ತ ವಯಸ್ಕರಿಂದ ಈ ಉದ್ದೇಶಪೂರ್ವಕವಲ್ಲದ ಗುಂಡಿನ ದಾಳಿಗಳಿಂದ ಪ್ರತಿ ವರ್ಷ ಸರಾಸರಿ 350 ಸಾವುಗಳಿಗೆ ಕಾರಣವಾಗುತ್ತವೆ ಎಂದು ಅಂದಾಜಿಸಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆತ್ಮಹತ್ಯೆಗಳು ಸೇರಿದಂತೆ ವರ್ಷಕ್ಕೆ ಸುಮಾರು 40,000 ಸಾವುಗಳು ಬಂದೂಕಿನಿಂದಲೇ ಸಂಭವಿಸುತ್ತವೆ ಎಂಬ ಅಂಕಿ ಅಂಶಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!