ಬಿಹಾರದಲ್ಲಿ ಭಾರೀ ದುರಂತ: ಹಳಿತಪ್ಪಿದ ಕಲ್ಲಿದ್ದಲು ಸಾಗಾಟದ ಗೂಡ್ಸ್ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ ಐವತ್ಮೂರು ಬೋಗಿಗಳು ಬುಧವಾರ ಬೆಳಗ್ಗೆ ಬಿಹಾರದ ಗಯಾ ಜಿಲ್ಲೆಯ ಗುರ್ಪಾ ನಿಲ್ದಾಣದಲ್ಲಿ ಧನ್‌ಬಾದ್ ವಿಭಾಗದ ಕೊಡೆರ್ಮಾ ಮತ್ತು ಮನ್‌ಪುರ್ ರೈಲ್ವೆ ವಿಭಾಗದ ನಡುವೆ ಹಳಿತಪ್ಪಿವೆ ಎಂದು ಪೂರ್ವ ಮಧ್ಯ ರೈಲ್ವೆ ಮಾಹಿತಿ ನೀಡಿದೆ.

ಈಸ್ಟ್ ಸೆಂಟ್ರಲ್ ರೈಲ್ವೇ ಪ್ರಕಾರ, ರೈಲು ಇಂದು ಬೆಳಿಗ್ಗೆ 6:24 ರ ಸುಮಾರಿಗೆ ಹಳಿತಪ್ಪಿದ್ದು, ಅಪ್ ಮತ್ತು ಡೌನ್ ಮಾರ್ಗಗಳಲ್ಲಿ ರೈಲಿನ ಸಂಚಾರ ಅಸ್ತವ್ಯಸ್ತವಾಘಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಧಿಕಾಋಈಘಳು ಸ್ಪಷ್ಟಪಡಿಸಿದ್ದಾರೆ.

ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!