ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯೊಳಕ್ಕೆ ನುಗ್ಗಿದ ಹಾವು: ಆತಂಕದ ವಾತಾವರಣ ಸೃಷ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಹಾವೊಂದು ನುಗ್ಗಿದೆ. ಗೃಹರಕ್ಷಕ ದಳದ ಕೊಠಡಿ ಬಳಿ ಐದು ಅಡಿ ಹಾವು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಮಾಡಿತ್ತು. ಹಾವನ್ನು ಕಂಡ ಸಿಬ್ಬಂದಿ ಭಯದಿಂದ ಅತ್ತಿಂದಿತ್ತ..ಇತ್ತಿಂದತ್ತ ಓಡಿದರು. ಸಿಬ್ಬಂದಿ ಗಲಾಟೆಗೆ ಹಾವು ಅಲ್ಲಿಯೇ ಇದ್ದ ಮರದ ಹಲಗೆಗಳ ನಡುವೆ ಅಡಗಿಕೊಂಡಿದೆ. ಕೂಡಲೇ ಸಿಬ್ಬಂದಿ ಅರಣ್ಯಾಧಿಕಾರಿಗಳಿಗೆ ಹಾಗೂ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ.

ಏಷ್ಯಾಟಿಕ್ ವಾಟರ್ ಸ್ನೇಕ್ ಎಂದು ಕರೆಯಲ್ಪಡುವ ಐದು ಅಡಿ ಉದ್ದದ ಚೆಕ್ಕರ್ ಕೀಲ್‌ಬ್ಯಾಕ್ ಹಾವನ್ನು ಅಂತಿಮವಾಗಿ ಸುರಕ್ಷಿತವಾಗಿ ಸೆರೆಹಿಡಿದು ಹತ್ತಿರದ ಕಾಡಿಗೆ ಬಿಟ್ಟರು. ಈ ಹಾವನ್ನು ವಿಷರಹಿತ ಹಾವು ಎಂದು ಗುರುತಿಸಲಾಗಿದೆ.

ಚೆಕರ್ಡ್ ಕೀಲ್ಬ್ಯಾಕ್ ಮುಖ್ಯವಾಗಿ ಸರೋವರ, ನದಿ, ಕೊಳ, ಕಾಲುವೆ, ಕೃಷಿ ಭೂಮಿ ಮತ್ತು ಬಾವಿಗಳಂತಹ ಜಲಮೂಲಗಳಲ್ಲಿ ಕಂಡುಬರುತ್ತದೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ವೇಳಾಪಟ್ಟಿ II ರ ಅಡಿಯಲ್ಲಿ ಈ ಜಾತಿಯ ಹಾವುಗಳನ್ನು ರಕ್ಷಿಸಲಾಗಿದೆ. ದೆಹಲಿಯಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನುಗ್ಗಿದ ಸುಮಾರು 70 ಹಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದಿದ್ದಾರೆ. ಮಳೆ ಮತ್ತು ಪ್ರವಾಹದಿಂದ ಹಾವುಗಳು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತವೆ ಎಂದು ಹೇಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!