ದೇಶದಲ್ಲಿ 5ಜಿ ಸೇವೆ: ಮಹತ್ವದ ಘೋಷಣೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

5ಜಿ ಬಿಡುಗಡೆಯ ಬಗ್ಗೆ ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಅಕ್ಟೋಬರ್ 12ರೊಳಗೆ 5ಜಿ ಸೇವೆಗಳನ್ನ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಇದರೊಂದಿಗೆ, ಸರ್ಕಾರವು 5ಜಿ ಸೇವೆಗಳನ್ನು ವೇಗವಾಗಿ ಪ್ರಾರಂಭಿಸಲು ಬಯಸುತ್ತದೆ ಎಂದು ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ನಾವು 5ಜಿ ಸೇವೆಗಳನ್ನ ವೇಗವಾಗಿ ಪ್ರಾರಂಭಿಸಲು ಯೋಜಿಸುತ್ತಿದ್ದೇವೆ. ಟೆಲಿಕಾಂ ಆಪರೇಟರ್ʼಗಳು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಮತ್ತು ಸ್ಥಾಪನೆಗಳನ್ನ ಮಾಡಲಾಗುತ್ತಿದೆ. ಅಕ್ಟೋಬರ್ 12ರೊಳಗೆ 5ಜಿ ಸೇವೆಗಳನ್ನು ಪ್ರಾರಂಭಿಸಲಾಗುವುದು ನಂತ್ರ ಅದನ್ನ ನಗರ ಮತ್ತು ಪಟ್ಟಣಗಳಿಗೆ ವಿಸ್ತರಿಸಲಾಗುವುದು’ ಎಂದರು.

‘ಮುಂದಿನ 2 ರಿಂದ 3 ವರ್ಷಗಳಲ್ಲಿ 5 ಜಿ ದೇಶದ ಪ್ರತಿಯೊಂದು ಭಾಗವನ್ನ ತಲುಪಬೇಕು ಎಂಬುದು ನಮ್ಮ ನಿರೀಕ್ಷೆ. ಇದು ಕೈಗೆಟುಕುವಂತೆ ಇರುವುದನ್ನ ನಾವು ಖಚಿತಪಡಿಸಿಕೊಳ್ಳುತ್ತೇವೆ. ಈ ಉದ್ಯಮವು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರ ಮೇಲೂ ಗಮನ ಹರಿಸುತ್ತಿದೆ ಎಂದರು.

ಸ್ಪೆಕ್ಟ್ರಂ ಹಂಚಿಕೆ ಪತ್ರ ನೀಡಿದ ನಂತ್ರ 5ಜಿ ಉಡಾವಣೆಗೆ ಸಿದ್ಧರಾಗಿರುವಂತೆ ವೈಷ್ಣವ್ ಈಗಾಗಲೇ ಟೆಲಿಕಾಂ ಸೇವಾ ಪೂರೈಕೆದಾರರನ್ನ ಕೇಳಿದ್ದರು. ರೇಡಿಯೋ ತರಂಗಗಳ ಯಶಸ್ವಿ ಬಿಡ್ಡರ್ಗಳು ಮುಂಗಡವಾಗಿ ಪಾವತಿಸಿದ ದಿನವೇ ದೂರಸಂಪರ್ಕ ಇಲಾಖೆ ಸ್ಪೆಕ್ಟ್ರಮ್ ಅಸೈನ್ಮೆಂಟ್ ಪತ್ರಗಳನ್ನು ಬಿಡುಗಡೆ ಮಾಡಿದೆ.

ಇತ್ತೀಚಿನ ಹರಾಜಿನಲ್ಲಿ ಗೆದ್ದ ಸ್ಪೆಕ್ಟ್ರಂಗಾಗಿ ಸೇವಾ ಪೂರೈಕೆದಾರರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ಅದಾನಿ ಡೇಟಾ ನೆಟ್ವರ್ಕ್ ಮತ್ತು ವೊಡಾಫೋನ್ ಐಡಿಯಾದಿಂದ ದೂರಸಂಪರ್ಕ ಇಲಾಖೆ ಸುಮಾರು ₹17,876 ಕೋಟಿ ಪಾವತಿಗಳನ್ನು ಸ್ವೀಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!