ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 6.0 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡೋನೇಷ್ಯಾದ ಪೂರ್ವ ನುಸಾ ತೆಂಗರಾ ದ್ವೀಪದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದೆ.
6.0 ತೀವ್ರತೆ ದಾಖಲಾಗಿದೆ ಎಂದು ಜಿಯೋಫಿಸಿಕ್ಸ್ ಏಜೆನ್ಸಿ ತಿಳಿಸಿದೆ.

ಭೂಕಂಪದ ಕೇಂದ್ರಬಿಂದುವು 75 ಕಿಲೋಮೀಟರ್ ಪೂರ್ವ ಇಂಡೋನೇಷ್ಯಾ ಪ್ರದೇಶದಲ್ಲಿ, ಟಿಮೋರ್ ಲೆಸ್ಟೆಗೆ ಸಮೀಪದಲ್ಲಿರುವ ಸಮುದ್ರದಲ್ಲಿದೆ ಎಂದು ಸಂಸ್ಥೆ ಹೇಳಿದೆ.

ಭೂಕಂಪದಿಂದಾಗಿ ಈವರೆಗೆ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!