Wednesday, September 27, 2023

Latest Posts

SHOCKING| ಒಂದೇ ಹಳಿಯಲ್ಲಿ ಮುಖಾಮುಖಿಯಾದ ಎರಡು ಪ್ಯಾಸೆಂಜರ್‌ ರೈಲುಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾ ರೈಲು ದುರಂತದ ಕಹಿ ನೆನಪು ಮರೆಯಾಗುವ ಮುನ್ನವೇ ಮತ್ತೊಂದು ಇಂತಹದ್ದೇ ಮಾದರಿಯ ಘಟನೆ ಹೈದಾರಾಬಾದ್ ನಲ್ಲಿ ಸಂಭವಿಸುವುದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿದೆ.

ಹೈದರಾಬಾದ್ ಮಲಕ್ ಪೆಟ್ ರೈಲು ನಿಲ್ದಾಣದ ಬಳಿ ಎರಡು ಲೋಕಲ್ ಪ್ಯಾಸೆಂಜರ್ ರೈಲುಗಳು ಒಂದೇ ಹಳಿಯಲ್ಲಿ ಪರಸ್ಪರ ಮುಖಾಮುಖಿಯಾಗಿವೆ.‌ ಇದನ್ನು ಗಮನಿಸಿ ತಕ್ಷಣ ಎಚ್ಚೆತ್ತ ಲೋಕೋ ಪೈಲಟ್‌ಗಳು ರೈಲುಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ್ದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿಹೋಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು ಅರ್ಧ ತಾಸಿನ ಬಳಿಕ ಎರಡೂ ರೈಲುಗಳ ಮಾರ್ಗ ಬದಲಾವಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಈ ಬಗ್ಗೆ ಆಂತರಿಕ ವಿಚಾರಣೆ ಕೈಗೆತ್ತಿಕೊಂಡಿದ್ದು, ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ‌ ಸಂಗ್ರಹಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!