ತನ್ನ 6 ಮಕ್ಕಳನ್ನು ಬಾವಿಯೊಳಕ್ಕೆ ತಳ್ಳಿ ಕೊಂದ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಐವರು ಪುತ್ರಿಯರು ಸೇರಿದಂತೆ ಆರು ಮಕ್ಕಳನ್ನು ಆಳವಾದ ಬಾವಿಗೆ ತಳ್ಳಿ ಹತ್ಯೆಗೈದಿರುವ ದುರಂತ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30 ವರ್ಷದ ಮಹಿಳೆಗೆ ಆಕೆಯ ಗಂಡನ ಕುಟುಂಬದ ಸದಸ್ಯರು ಥಳಿಸಿದ್ದರು, ಇದರಿಂದ ಬೇಸತ್ತ ಮಹಿಳೆ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಅವರು ಹೇಳಿದರು.
ನೀರಿನಲ್ಲಿ ಮುಳುಗಿದ ಎಲ್ಲಾ ಮಕ್ಕಳು 18 ತಿಂಗಳಿಂದ 10 ವರ್ಷದ ಒಳಗಿನವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!