ಮುಳುಗುತ್ತಿದ್ದ ಹಡಗಿನಿಂದ 6 ಮಂದಿಯ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿನ್ನೆ ತಡರಾತ್ರಿ ಕೇರಳದ ಬೇಪೂರಿನ ಬಳಿ ಕರಾವಳಿ ರಕ್ಷಕ ಪಡೆಯು ರಕ್ಷಣಾ ಕಾರ್ಯಾಚರಣೆ ನಡೆಸಿ ಮುಳಗುತ್ತಿದ್ದ ಹಡಗಿನಿಂದ ಆರು ಮಂದಿಯನ್ನು ರಕ್ಷಿಸಲಾಗಿದೆ.

ನಿನ್ನೆ ರಾತ್ರಿ ಕಟ್ಟಡ ಸಾಮಗ್ರಿಗಳು, ಜಾನುವಾರುಗಳು ಮುಂತಾದ ಸರಕುಗಳನ್ನು ತುಂಬಿಕೊಂಡು ಹೊರಟಿದ್ದ ʼಎಂಎಸ್‌ವಿ ಮಲಬಾರ್‌ ಲೈಟ್‌ʼ ಹಡಗು ಬೇಪೂರಿನ ಬಳಿ ಅವಘಡಕ್ಕೆ ತುತ್ತಾಗಿ ಮುಳುಗಲು ಪ್ರಾರಂಭಿಸಿತು. ಈ ಕುರಿತು ಮುಂಬೈನ ಕಡಲ ರಕ್ಷಕ ಸಮನ್ವಯ ಕೇಂದ್ರದಿಂದ ಸಂದೇಶ ರವಾನೆಯಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕೇರಳದ ಕಡಲ ರಕ್ಷಕ ಪಡೆಗಳು ತಕ್ಷಣವೇ ತಮ್ಮ ಸಿ-404 ರಕ್ಷಣಾ ನೌಕೆಯ ಮೂಲಕ ಧಾವಿಸಿ ಜೀವ ರಕ್ಷಕ ಬೋಟುಗಳಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ 6 ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕರಾವಳಿ ರಕ್ಷಣಾಪಡೆಗಳ ಮಾಹಿತಿ ಆಧಾರದ ಮೇಲೆ ಹಡಗಿನ ಇಂಜಿನ್‌ ರೂಮ್‌ ನಲ್ಲಿ ನೀರು ನುಗ್ಗಿದ್ದರಿಂದ ಹಡಗು ಮುಳುಗಡೆಯಾಗಿದೆ ಎನ್ನಲಾಗಿದ್ದು ಎಲ್ಲ ಆರೂ ಜನರು ಸುರಕ್ಷಿತರಾಗಿದ್ದಾರೆ ಎಂದು ರಕ್ಷಣಾಪಡೆಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!