ಚೀನಾದಲ್ಲಿ ರಣಭೀಕರ ಮಳೆ: 6 ಸಾವು, 2 ಲಕ್ಷ ಜನರು ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ವಾರ ಆರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು 2 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ ಆಗ್ನೇಯ ಚೀನಾದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ, ಫುಜಿಯಾನ್ ಪ್ರಾಂತ್ಯದಲ್ಲಿ ಮಂಗಳವಾರ ಮನೆ ಕುಸಿತ ದುರಂತದಲ್ಲಿ ಮೂರು ಜೀವಗಳು ಬಲಿಯಾಗಿವೆ. ಜಿಯಾಂಗ್ಕ್ಸಿ ಪ್ರಾಂತ್ಯದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದ ಪರ್ವತ ಭಾಗದಲ್ಲಿ ಭಾರೀ ಮಳೆಯಿಂದ ವಾಹನವೊಂದು ನೀರಿಗೆ ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿ ಮೂವರು ಕಾಣೆಯಾಗಿದ್ದಾರೆ.
ಕಳೆದ ವಾರ ಭಾರೀ ಮಳೆಗೆ ಚೀನಾದ ಕೇಂದ್ರ ಭಾಗದಲ್ಲಿ 17 ಮಂದಿ ಮೃತಪಟ್ಟಿದ್ದರು. ಚೀನಾದ ಫುಜಿಯಾನ್, ಜಿಯಾಂಗ್‌ಕ್ಸಿ, ಗುವಾಂಗ್‌ಡಾಂಗ್ ಮತ್ತು ಗುವಾಂಗ್‌ಕ್ಸಿ ಪ್ರದೇಶದಲ್ಲಿ ಇನ್ನೊಂದು ವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಆ ಪ್ರದೇಶಗಳಲ್ಲಿ ಈಗಾಗಲೇ ಮಣ್ಣು ಕುಸಿತ ಸಂಭವಿಸುತ್ತಿದ್ದು ಸ್ಥಳೀಯ ನಿವಾಸಿಗಳು ಪ್ರವಾಹ ಮತ್ತು ಭೂಕುಸಿತ ಪರಿಸ್ಥತಿಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!