2.14 ಕೋಟಿ ಮೌಲ್ಯದ ಅಕ್ರಮ ಮದ್ಯ ನಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳ್ಳಸಾಗಣೆ ಮಾಡುತ್ತಿದ್ದ ಬರೋಬ್ಬರಿ 2.14 ಕೋಟಿ ಮೌಲ್ಯದ ಮದ್ಯವನ್ನು ಪ್ರಕಾಶ್ ಜಿಲ್ಲೆಯ ಒಂಗೋಲ್ ಉಪನಗರದಲ್ಲಿ ಬುಧವಾರ ಸಂಜೆ ನಾಶಪಡಿಸಲಾಗಿದೆ. ಜಿಲ್ಲಾ ಎಸ್ಪಿ ಮಾಲಿಕಾಗರ ಸಮ್ಮುಖದಲ್ಲಿ ಅಕ್ರಮ ಮದ್ಯದ ಬಾಟಲಿಗಳನ್ನು ರೋಡ್‌ ರೋಲರ್‌ನಿಂದ ಒಡೆದು ಹಾಕಲಾಗಿದೆ.

2019 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಎಸ್‌ಇಬಿ ಪೊಲೀಸರು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದು, ಬೇರೆ ರಾಜ್ಯಗಳಿಂದ ಜಿಲ್ಲೆಗೆ ತರಲಾಗುತ್ತಿದ್ದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯ ಎಸ್ಇಬಿ ಠಾಣೆಗಳಲ್ಲಿ 904 ಪ್ರಕರಣಗಳು ದಾಖಲಾಗಿವೆ. ಇತರೆ ರಾಜ್ಯಗಳ ವಿವಿಧ ಬ್ರಾಂಡ್‌ಗಳ ಮದ್ಯದ 42,810 ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳ ಮೌಲ್ಯ ರೂ. 2.14 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯ ನೋಡಿ ಮದ್ಯಪ್ರಿಯರ ಎದೆ ಹೊಡೆದುಹೋದಂತಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!