ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ 6 ಲಕ್ಷ ಎಕರೆಯನ್ನು ವಕ್ಫ್ ಆಸ್ತಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ವಕ್ಫ್ ದೊಡ್ಡ ಅನ್ಯಾಯ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆ ಆಗಿದೆ. ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು. ವಕ್ಫ್ ಟ್ರಿಬ್ಯುನಲ್ ಒಂದು ಶಾಪ ಆಗಿದೆ. ಹೀಗಾಗಿ, ನ್ಯಾಯಾಲಯದ ಮೂಲಕವೇ ಎಲ್ಲವೂ ಇತ್ಯರ್ಥ ಆಗಬೇಕು. ಈಗ 2,700 ಎಕರೆ ಜಾಗ ಖಬರ್ ಸ್ತಾನಗೆ ಕೊಡೋಕೆ ಸರ್ಕಾರ, ಕಂದಾಯ ಇಲಾಖೆ ನಿರ್ಣಯ ಮಾಡಿದೆ. ವಕ್ಫ್‌ಗೆ ಎಷ್ಟು ಜಾಗ ತಗೋಬೋದು ಅಂತಾ ಅವರು ಲೀಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು