ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಹಿಂದೂಗಳ ನಡುವೆ ಐಕ್ಯತೆಯ ಘೋಷಣೆಯ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಜನರು ಈ ಘೋಷಣೆಯನ್ನು ತಪ್ಪು ಅರ್ಥದಲ್ಲಿ ಅರ್ಥೈಸದೆ ಒಗ್ಗಟ್ಟಿನಿಂದ ಭಯೋತ್ಪಾದನೆ ಮತ್ತು ಶತ್ರುಗಳ ವಿರುದ್ಧ ಹೋರಾಟಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.
ಗಡ್ಕರಿ ಮಾತನಾಡಿ, “ನಮ್ಮ ಪೂಜಾ ವಿಧಾನಗಳು ವಿಭಿನ್ನವಾಗಿರಬಹುದು, ಕೆಲವರು ದೇವಸ್ಥಾನಗಳಿಗೆ ಹೋಗುತ್ತಾರೆ, ಕೆಲವರು ಮಸೀದಿಗಳಿಗೆ ಮತ್ತು ಚರ್ಚ್‌ಗಳಿಗೆ ಹೋಗುತ್ತಾರೆ, ಆದರೆ ಕೊನೆಯಲ್ಲಿ, ನಾವೆಲ್ಲರೂ ಭಾರತೀಯರು. ನಾವು ‘ಬಾಟಂಗೆ ತೋ ಕಟೆಂಗೆ’ ಎಂಬುದಕ್ಕೆ ಬೇರೆ ಅರ್ಥವನ್ನು ಅರ್ಥೈಸಬಾರದು ಭಯೋತ್ಪಾದನೆ ಮತ್ತು ದೇಶದ ಶತ್ರುಗಳ ವಿರುದ್ಧ ಒಗ್ಗಟ್ಟಾಗಿ ನಿಲ್ಲಬೇಕು” ಎಂದರು.
“ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‌ಸಿಪಿಯ ಮಹಾಯುತಿ ಮೈತ್ರಿಕೂಟವು ನಿರ್ಣಾಯಕ ಬಹುಮತದಿಂದ ಗೆಲ್ಲಲಿದೆ. ನನಗೆ ವಿಶ್ವಾಸವಿದೆ. ಈ ಮೈತ್ರಿಯಿಂದ ನಮಗೆ ಲಾಭವಾಗಲಿದೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಗೆಲ್ಲುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.