ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್‌ಗೆ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಶನಿವಾರ ಇಂಗ್ಲಿಷ್ ಚಾನೆಲ್‌ನಲ್ಲಿ ಮುಳುಗಿ ಆರು ಜನ ಸಾವನ್ನಪ್ಪಿರುವುದಾಗಿ ಫ್ರೆಂಚ್ ಕಡಲ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ. ಇಬ್ಬರು ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಫ್ರೆಂಚ್ ಅಧಿಕಾರಿಗಳ ಪ್ರಕಾರ, ಮುಳುಗಿದ ದೋಣಿಯಲ್ಲಿ 65 ರಿಂದ 66 ಜನರು ಇದ್ದರು ಎಂದಿದ್ದಾರೆ. ಬದುಕುಳಿದವರನ್ನು ಬ್ರಿಟಿಷ್ ಅಧಿಕಾರಿಗಳು ಡೋವರ್‌ಗೆ ಕರೆದೊಯ್ದಿದ್ದಾರೆ.
4 ಫ್ರೆಂಚ್ ಹಡಗುಗಳು, ಒಂದು ಹೆಲಿಕಾಪ್ಟರ್ ಮತ್ತು ಎರಡು ಬ್ರಿಟಿಷ್ ಹಡಗುಗಳು ರಕ್ಷಣಾ ಕಾರ್ಯಾಚರಣೆಗಾಗಿ ಧಾವಿಸಿ, ಬದುಕುಳಿದ ವಲಸಿಗರನ್ನು ಬ್ರಿಟೀಷ್ ಹಡಗು ರಕ್ಷಿಸಿವೆ.
ಇಂಗ್ಲಿಷ್ ಚಾನೆಲ್ ಪ್ರಪಂಚದ ಅತ್ಯಂತ ಜನನಿಬಿಡ ಜಲಮಾರ್ಗಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ. ಮಾನವ ಕಳ್ಳಸಾಗಣೆದಾರರು ಹಡಗುಗಳನ್ನು ಓವರ್‌ಲೋಡ್ ಮಾಡುತ್ತಾರೆ, ಇದೇ ಕಾರಣದಿಂದಾಗಿ ಸಮುದ್ರಗಳಲ್ಲಿ ಸಾವುಗಳು ಸಾಮಾನ್ಯವಾಗಿವೆ. ಈ ಜಲಮಾರ್ಗದಲ್ಲಿ ಫ್ರೆಂಚ್ ಅಧಿಕಾರಿಗಳು ಗಸ್ತು ಹೆಚ್ಚಿಸಿದ್ದಾರೆ.