Friday, September 29, 2023

Latest Posts

ನಟ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಸುಧಾಮೂರ್ತಿಗೆ ತುಂಬಾ ಇಷ್ಟವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ತಮ್ಮ ಸರಳತೆಯಿಂದಲೇ ಜನರ ಮನಗೆದ್ದವರು.  ಇದಲ್ಲದೆ, ಅವರು ಸಂದರ್ಶನಗಳಲ್ಲಿ ಹೇಳುವ ಅನೇಕ ವಿಷಯಗಳಿಂದ ಜನ ಸ್ಫೂರ್ತಿ ಪಡೆಯುತ್ತಾರೆ. ತಮ್ಮ ಇಷ್ಟದ ಅಡುಗೆ, ತಿಂಡಿ, ತಿನಿಸುಗಳ ಬಗ್ಗೆಯೂ ಮಾತನಾಡುತ್ತಾರೆ. ಹಾಗೆಯೇ ಇತ್ತೀಚೆಗೆ ತೆಲುಗು ನಟ ಪ್ರಭಾಸ್‌ ಸಿನಿಮಾದ ಈ ಹಾಡೆಂದರೆ ಇಷ್ಟ ಎಂಬುದಾಗಿ ಸಂದರ್ಶವೊಂದರಲ್ಲಿ ಹೇಳಿದ್ದಾರೆ.

ಸುಧಾಮೂರ್ತಿಗೂ ತೆಲುಗು ಸಿನಿಮಾ ಹಾಡುಗಳ ಬಗ್ಗೆ ಒಲವಿದೆ ಎಂಬ ಮಾತನ್ನು ಹೇಳಿದರು. ಆಕೆಯ ಮೆಚ್ಚಿನ ತೆಲುಗು ಚಲನಚಿತ್ರ ಪ್ರಭಾಸ್ ಅಭಿನಯದ ‘ಮಿರ್ಚಿ’. ಈ ಸಿನಿಮಾದ ‘ಕಾಟುಕ ಕಳ್ಳನು ಚೂಸ್ತೆ ಪೋತುಂದೆ ಮತಿ ಪೋತುಂದೆ’ ಹಾಡು ನನಗೆ ತುಂಬಾ ಇಷ್ಟ ಎಂದು ಸುಧಾಮೂರ್ತಿ ಹೇಳಿದ್ದಾರೆ. ಅಷ್ಟೇ ಅಲ್ಲ ಆ ಹಾಡನ್ನು ಸಂದರ್ಶನದಲ್ಲಿ ಹಾಡಿದ್ದಾರೆ ಕೂಡ.

Instagram ಬಳಕೆದಾರ prabhas_ashok ಅವರು ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ಅನೇಕ ಜನರನ್ನು ಆಕರ್ಷಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!