ರಾಷ್ಟ್ರೋತ್ಥಾನ ತಪಸ್‍ನ 6 ವಿದ್ಯಾರ್ಥಿಗಳು ಐಐಟಿ, 18 ವಿದ್ಯಾರ್ಥಿಗಳು ಎನ್‍ಐಟಿ ಪ್ರವೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು
ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೋತ್ಥಾನ ತಪಸ್‌ ನಲ್ಲಿ ಉಚಿತ ಶಿಕ್ಷಣ ಹಾಗೂ ತರಬೇತಿ ಪಡೆದಿರುವ 39 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಹಾಗೂ 18 ವಿದ್ಯಾರ್ಥಿಗಳು ಎನ್‍ಐಟಿಗೆ ಪ್ರವೇಶ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಬ್ಯಾಚ್‌ ನಲ್ಲಿ ಅತ್ಯುತ್ತಮ ಶ್ರೇಣಿಯನ್ನು ಪಡೆದ ಸ್ಕಂದ ಐತಾಳ್‌ ಅವರಿಗೆ ಐಐಟಿ- ಗುವಹಾಟಿ, ಚಂದ್ರು ಸಿ.ಪಿ. ಅವರು ಐಐಟಿ-ಗುವಹಾಟಿ, ಲಿಕಿತ್ ಆರ್. ಅವರು ಐಐಟಿ-ರೂರ್ಕಿ, ಕಾರ್ತಿಕ್ ಎಸ್.‌ ಅವರು ಐಐಟಿ-ರೂರ್ಕಿ, ಪ್ರಕಾಶ್ ಗೌಡ‌ ಟಿ.ಆರ್. ಅವರು ಐಐಟಿ- ಚೆನೈ, ಅನಿಲ್‌ ಕುಮಾರ್‌ ಕೆ. ಅವರು ಅವರು ಐಐಟಿ-ತಿರುಚ್ಚಿಯಲ್ಲಿ ಪ್ರವೇಶ ಪಡೆದಿದ್ದಾರೆ. ಇನ್ನುಳಿದ 18 ಮಂದಿ ಎನ್‍ಐಟಿಕೆ ಸುರತ್ಕಲ್‌ ನಲ್ಲಿ ಸ್ಥಾನ ಪಡೆದಿದ್ದಾರೆ.
ಈ ಬಾರಿ ತಪಸ್‍ನ 39 ವಿದ್ಯಾ ರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆದಿದ್ದು, ಅವರಲ್ಲಿ 12
ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ‌ ಐಐಟಿಗಳಲ್ಲಿ ಪ್ರವೇಶದ ಅರ್ಹತೆ ಹಾಗೂ 27 ವಿದ್ಯಾರ್ಥಿಗಳು ಎನ್‌ ಐಟಿ ಮೊದಲಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಷ್ಟು ಅರ್ಹ ಅಂಕಗಳನ್ನು ಪಡೆದಿದ್ದರು.
ಈ ಎಲ್ಲಾ ವಿದ್ಯಾರ್ಥಿಗಳೂ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ದುರ್ಬಲ ವರ್ಗದಿಂದ ಬಂದವರಾಗಿದ್ದು, ಕನ್ನಡ ಮಾಧ್ಯಮ ಶಿಕ್ಷಣದ ಹಿನ್ನೆಯನ್ನು ಹೊಂದಿದ್ದಾರೆಂಬುದು ವಿಶೇಷ. ಕರ್ನಾಟಕದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಪ್ರತಿಭಾನ್ವಿತ ಮತ್ತು ಅರ್ಹ ಬಡ ಗಂಡುಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯೇ ತಪಸ್.
ಉಚಿತ ವಸತಿ, ಊಟ, ಶಿಕ್ಷಣ ಹಾಗೂ ಇನ್ನಿತರೆ ಸವಲತ್ತುಗಳನ್ನು ಒದಗಿಸಿ ದೇಶದ ಪ್ರತಿಷ್ಠಿತ ಐಐಟಿ, ಎನ್‍ಐಟಿ ಮತ್ತಿತರೆ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ನೆರವಾಗುತ್ತಿದೆ.
2022-24ನೇ ಸಾಲಿನ ತಪಸ್ ಪ್ರವೇಶ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ.
ಆಸಕ್ತರು ಡಿಸೆಂಬರ್ 10ರ ಒಳಗೆ ಆನೈನ್‌ ಮೂಲಕ ಅರ್ಜಿ ಸಲ್ಲಿಸಿ : www.tapassaadhana.org
ತಪಸ್ ಗಂಡು ಮಕ್ಕಳಿಗೆ ಸಾಧನಾ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ PUC ಶಿಕ್ಷಣ ಹಾಗೂ NEET ತರಬೇತಿ ಅಥವಾ Integrated BSc BEd ಶಿಕ್ಷಣವನ್ನು ಉಚಿತವಾಗಿ ನೀಡುತ್ತದೆ.
ಮಾಹಿತಿಗೆ ಸಂಪರ್ಕಿಸಿ: 94812 01144/ 98446 02529/ 79759 13828

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!