ಕೇರಳ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಸಿಗಲಿದೆ 60 ದಿನ ಹೆರಿಗೆ ರಜೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯವು ಮೊದಲ ಬಾರಿಗೆ 18 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಪದವಿ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿದೆ.

ಈ ಕುರಿತು ಉಪ ಕುಲಪತಿ ಸಿ.ಟಿ. ಅರವಿಂದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದ್ದು, ವಿದ್ಯಾರ್ಥಿನಿಯರು 60 ದಿನಗಳ ನಂತರ ಅವರು ಯಾವುದೇ ಅಡೆತಡೆಯಿಲ್ಲದೇ ಅಧ್ಯಯನವನ್ನು ಮುಂದುವರಿಸಬಹುದು ಎಂದು ತಿಳಿಸಿದೆ.

ಮಾತೃತ್ವ ರಜೆಯನ್ನು ಹೆರಿಗೆಯ ಮೊದಲು ಅಥವಾ ನಂತರ ತೆಗೆದುಕೊಳ್ಳಬಹುದು. ಆದರೆ ಮೊದಲ ಅಥವಾ ಎರಡನೆಯ ಗರ್ಭಧಾರಣೆಗೆ ಮಾತ್ರ ಈ ರಜೆ ಅನ್ವಯಿಸಲಿದ್ದು, ಕೋರ್ಸ್ ಅವಧಿಯಲ್ಲಿ ಒಮ್ಮೆಈ ರಜೆ ತೆಗೆದುಕೊಳ್ಳಬಹುದಾಗಿದೆ.ರಜೆಯ ಅವಧಿಯು ಸಾರ್ವಜನಿಕ ಮತ್ತು ಸಾಮಾನ್ಯ ರಜಾದಿನಗಳನ್ನು ಒಳಗೊಂಡಿದೆ. ಇದರ ಜೊತೆಗೆ ಗರ್ಭಪಾತ, ಟ್ಯೂಬೆಕ್ಟಮಿ ಇತ್ಯಾದಿ ಪ್ರಕರಣಗಳಲ್ಲಿ 14 ದಿನಗಳ ರಜೆ ನೀಡಲಾಗುವುದು ಎಂದು ಮಾಹಿತಿ ನೀಡಿದೆ.

ಮಾತೃತ್ವ ರಜೆ ಪಡೆಯುವ ವಿದ್ಯಾರ್ಥಿನಿಯರು ರಜೆ ಪ್ರಾರಂಭವಾಗುವ 3 ದಿನಗಳ ಮೊದಲು ಅರ್ಜಿಯನ್ನು ಸಲ್ಲಿಸಬೇಕು. ಇದರ ಜೊತೆಗೆ ನೋಂದಾಯಿತ ವೈದ್ಯರ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!